ಉರುವಾಲು: ಉರುವಾಲು ಪದವು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಶಾಲಾಡಳಿತ ಸಮಿತಿಯ ತಾರತಮ್ಯ ನೀತಿ ವಿರೋಧಿಸಿ ಬೃಹತ್ ಪ್ರತಿಭಟನೆ ಹಾಗೂ ಕಾಲ್ನಡಿಗೆ ಜಾಥಾವು ಡಿ.13 ರಂದು ಕುಪ್ಪೆಟ್ಟಿಯಿಂದ ಉರುವಾಲು ಪದವು ಶಾಲೆ ತನಕ ನಡೆಯಿತು.

63 ವರ್ಷಗಳ ಇತಿಹಾಸ ಹೊಂದಿರುವ ಅ.ಖಾ.ಹಿ.ಪ್ರಾ. ಶಾಲೆ ಉರುವಾಲು ಪದವು ಇದರ ಆಡಳಿತ ಸಮಿತಿ ತೋರುತ್ತಿರುವ ತಾರತಮ್ಯ ನೀತಿ ಮತ್ತು ಕನ್ನಡ ಶಾಲೆಯನ್ನು ಬಂದ್ ಮಾಡಲು ಹೊರಟಿರುವುದರ ವಿರುದ್ಧ ಹಳೆ ವಿದ್ಯಾರ್ಥಿ ಸಂಘದಿಂದ ಬೃಹತ್ ಪ್ರತಿಭಟನಾ ಜಾಥ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ಕೆ.ಆರ್.ಎಸ್ ಉಪಸ್ಥಿತರಿದ್ದರು.