ಬೆಳ್ತಂಗಡಿ: ಕಾಫಿನಾಡಿಗೆ ಪ್ರವಾಸಕ್ಕೆ ತೆರಳುವ ಪ್ರವಾಸಿಗರೇ ಗಮನಿಸಿ 6 ದಿನಗಳ ಕಾಲ ಪಶ್ಚಿಮ ಘಟ್ಟಗಳ ಸಾಲಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ.
ಡಿ.22 ರಿಂದ 27ರವರೆಗೆ 6 ದಿನಗಳ ಕಾಲ ಗಿರಿ ಭಾಗಕ್ಕೆ ಪ್ರವಾಸಿಗರು ಬರೋದನ್ನು ನಿರ್ಬಂಧಿಸಲಾಗಿದೆ. ಡಿ. 24, 25, 26ರಂದು ಕಾಫಿನಾಡು ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ಇರುವ ಹಿನ್ನೆಲೆ ಡಿ.26ರಂದು 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಕ್ಕೆ ನಿರ್ಬಂಧ ಹೇರಿದೆ.
ಇನ್ನು ಗಿರಿ ಭಾಗದಲ್ಲಿ ಕ್ರಿಸ್ ಮಸ್ ಸೆಲೆಬ್ರೇಷನ್ ಗೂ ಅವಕಾಶವಿಲ್ಲ. 6 ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್ ಬ್ಯಾನ್ ಮಾಡಲಾಗಿದೆ.ಡಿ.17ರಿಂದ 26ರವರೆಗೆ ನಡೆಯಲಿರುವ ದತ್ತಜಯಂತಿ ಸಂಭ್ರಮ ನಡೆಯಲಿದೆ. ಟೂರಿಸ್ಟ್ ಗಾಡಿ, ಮಾಲಾಧಾರಿಗಳ ಗಾಡಿಯಿಂದ ಟ್ರಾಫಿಕ್ ಜಾಮ್ ಸಮಸ್ಯೆ ಆಗಬಾರದೆಂದು ನಿರ್ಬಂಧ ಹೇರಲಾಗಿದೆ.