24 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿರಾಜ್ಯ ಸುದ್ದಿ

ಆರಂಬೋಡಿ: ಪಾಣಿಮೇರುನಲ್ಲಿ ಅಕ್ರಮ ಮರಳು ಸಾಗಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಆರಂಬೋಡಿ :ಇಲ್ಲಿಯ ಪಾಣಿಮೇರುನಲ್ಲಿ ಡಿ.12 ರಂದು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ನಂಬ್ರ ಕೆ.ಎಲ್‌ 41-2992 ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ.14 ರಂದು ಪ್ರಕರಣ ದಾಖಲಾಗಿದೆ.

ಮಂಗಳೂರು ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಗಿರೀಶ್‌ ಮೋಹನ್‌ ಎಸ್ ರವರ ದೂರಿನಂತೆ, ಡಿ. 12 ರಂದು ಸಂಜೆ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ಪಾಣಿಮೇರು ಎಂಬಲ್ಲಿ ಲಾರಿ ನಂಬ್ರ ಕೆ.ಎಲ್‌ 41-2992 ರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಡಿ. 13 ರಂದು ಸಂಜೆ ಗಿರೀಶ್ ರವರಿಗೆ ವೀಡಿಯೋ ತುಣುಕು ದೊರಕಿದ್ದು, ಈ ಬಗ್ಗೆ ಪರಿಶೀಲಿಸಿ, ಡಿ: 14 ರಂದು ಸಿಸಿ ಕ್ಯಾಮರಾವನ್ನೂ ತಪಾಸಣೆ ನಡೆಸಲಾಗಿ ಅಕ್ರಮ ಮರಳು ಸಾಗಾಟ ಮಾಡುವುದು ದೃಢಪಟ್ಟ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 79/2023 ಕಲಂ: 379 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಾಲ್ಕೆತ್ತು ಕೋಲ

Suddi Udaya

ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100 ಫಲಿತಾಂಶ

Suddi Udaya

ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದಲ್ಲಿ ಹೋರಾಟ ಸಮಿತಿ ರಚನೆ

Suddi Udaya

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

Suddi Udaya

ವಾಲಿಬಾಲ್ ಪಂದ್ಯಾಟ: ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ಹುಡುಗರ ತಂಡ ಪ್ರಥಮ ಸ್ಥಾನ

Suddi Udaya

ಪಟ್ರಮೆ: ಉಳಿಯಬೀಡುನಲ್ಲಿ ‘ಭರತ ಬಾಹುಬಲಿ’ ತಾಳಮದ್ದಲೆ

Suddi Udaya
error: Content is protected !!