April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂದಾರು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಬಂದಾರು : ಗ್ರಾಮ ಪಂಚಾಯತ್ ಬಂದಾರು ಹಾಗೂ ಕೆನರಾ ಬ್ಯಾಂಕ್ ಪದ್ಮುಂಜ ಇದರ ಸಹಯೋಗದೊಂದಿಗೆ ಬಂದಾರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇವರು ನೆರವೇರಿಸಿದರು.

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಕೀಲರು ಉದಯ್ ಕುಮಾರ್ ಬಿ. ಕೆ ಯವರು ವಿವಿಧ ಯೋಜನೆಗಳ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಆರ್ಥಿಕ ಸಾಕ್ಷರತ ಸಂಯೋಜಕಿ ಉಷಾ ರವರು ವಿವಿಧ ಸೌಲಭ್ಯಗಳ ಹಾಗೂ ಯೋಜನೆಗಳ ಅನುಷ್ಠಾನ ದ ಬಗ್ಗೆ ವಿಸ್ಕೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪದ್ಮುಂಜ ಕೆನರಾ ಬ್ಯಾಂಕ್ ಮೆನೇಜರ್ ದಿಪೇಶ್ , ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪವತಿ ಬರಮೇಲು, ಗ್ರಾ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ ಗೌಡ ಪುಯಿಲ, ಮಾಜಿ ಉಪಾಧ್ಯಕ್ಷ ಗಂಗಾಧರ ಗೌಡ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಕಾರ್ಯಕ್ರಮದ ಪ್ರಭಾರಿ ರಕ್ಷಿತ್ ಪಣೆಕ್ಕರ ಹಾಗೂ ಸರ್ವ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ , ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಯೋಜನೆಗಳ ಅರ್ಜಿ ಸಲ್ಲಿಸಲು ಗ್ರಾಮಸ್ಥರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಮಗ್ರ ಕೃಷಿಯಲ್ಲಿ ರಾಷ್ಟ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮೊಗ್ರು ಗ್ರಾಮದ ದೇವಿಪ್ರಸಾದ್ ಗೌಡ ಕಡಮ್ಮಜೆ ಇವರಿಗೆ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿಯನ್ನು ಸನ್ಮಾನಿಸಲಾಯಿತು ಹಾಗೂ ಸಂಜೀವಿನಿ ಒಕ್ಕೂಟದ ಫಲಾನುಭವಿಗಳಾದ ಶ್ರೀಮತಿ ರೂಪ ವಿಶ್ವಕರ್ಮ, ಶ್ರೀಮತಿ ಶೋಭಾಹರೀಶ್ ತಾರಕೆರೆ ,ಶ್ರೀಮತಿ ಗೀತ , ಮುದ್ರಾ ಯೋಜನೆಯ ಫಲಾನುಭವಿ ಸತ್ಯಪ್ರಕಾಶ್ ಉಂತನಾಜೆ ಹಾಗೂ ಪೋಷನ್ ಯೋಜನೆ ಅಡಿಯಲ್ಲಿ ಅಂಗನವಾಡಿ ಮಕ್ಕಳಾದ ಚೈತನ್ಯ, ಮನ್ವಿತ್ ಇವರನ್ನು ಸನ್ಮಾನಿಸಲಾಯಿತು.

Related posts

ಬೆಳ್ತಂಗಡಿ: ಸಂತೆಕಟ್ಟೆ ರಿಕ್ಷಾ ಚಾಲಕರಿಂದ ಹುಣ್ಸೆಕಟ್ಟೆಯಿಂದ ಸಂತೆಕಟ್ಟೆಯವರೆಗೆ ರಸ್ತೆ ದುರಸ್ತಿ ಕಾರ್ಯ

Suddi Udaya

ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರದ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಅವರ ಆಯ್ಕೆಯನ್ನು ತಡೆ ಹಿಡಿದದ್ದು ಶಿಕ್ಷಕ ಸಮುದಾಯಕ್ಕೆ ಮಾಡಿದ ಅವಮಾನ: ಪ್ರತಾಪಸಿಂಹ ನಾಯಕ್

Suddi Udaya

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಪೂಜಾರಿ ಸೇವೆಯಿಂದ ನಿವೃತ್ತಿ

Suddi Udaya

ಪಡ್ಲಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಶಶಿಧರ ಎಂ ಗೌಡ ರವರಿಗೆ ಸ್ವಾಗತ ಸಮಾರಂಭ

Suddi Udaya

ಕಳೆಂಜ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya
error: Content is protected !!