September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ :ಕರ್ನೋಡಿ ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿ ಆಂಗ್ಲ ಮಾಧ್ಯಮ ಉದ್ಘಾಟನೆ

ಲಾಯಿಲ: ಕರ್ನೋಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿ ದ್ವಿ ಭಾಷಾ ಮಾಧ್ಯಮ(ಆಂಗ್ಲ ಮಾಧ್ಯಮ) ಇದರ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಎಮ್.ಕೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ ಇವರು ಮಕ್ಕಳಿಗೆ ಉಚಿತ ಪಠ್ಯ ಪುಸ್ತಕವನ್ನು ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಗಂಧಿ ಜಗನ್ನಾಥ್, ಸದಸ್ಯರಾದ ಗಣೇಶ್.ಆರ್, ಅರವಿಂದ ಶೆಟ್ಟಿ, ಶ್ರೀಮತಿ ತಾರಾಕೇಸರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಟಿ. ಬಿ ಬಸಲಿಂಗಪ್ಪ ಕ್ಷೇತ್ರ ಸಮನ್ವಯ ಅಧಿಕಾರಿ ಮೋಹನ್ ಕುಮಾರ್ ಸಿ.ಎನ್ ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶ್ರೀಮತಿ ಸೌಮ್ಯ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಜಗನ್ನಾಥ್ ಎಮ್. , ಮುಖ್ಯೋಪಾಧ್ಯಾಯರು ಕರ್ನೋಡಿ ಶಾಲೆ, ಸದಾಶಿವ ಸಮಗಾರ ಕಕ್ಕೇನ, ಕೋಶಾಧಿಕಾರಿ ಹಳೆ ವಿದ್ಯಾರ್ಥಿ ಸಂಘ ಕರ್ನೋಡಿ, ಇವರು ಅಥಿತಿಗಳಾಗಿ ಉಪಸ್ಥಿತರಿದ್ದರು.

1 ನೇ ತರಗತಿಯ ಮಕ್ಕಳಿಗೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಅಶ್ರಫ್ ಮಾಂಜಾಲು ಇವರು ಸಮವಸ್ತ್ರವನ್ನು ಉಚಿತವಾಗಿ ನೀಡಿದರು. ಮುಖ್ಯ ಶಿಕ್ಷಕರಾದ ಶ್ರೀ ಜಗನ್ನಾಥ ಎಮ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಮಮತಾ ಧನ್ಯವಾದವಿತ್ತರು. ಸಹ ಶಿಕ್ಷಕರಾದ ಕೃಷ್ಣ ಕುಮಾರ್, ಶ್ರೀಮತಿ ಗಂಗಾರಾಣಿ , ಶ್ರೀಮತಿ ತ್ರಿಷಾಲ, ಶ್ರೀಮತಿ ಲೀನಾ ಡಿಸೋಜಾ ಇವರು ಸಹಕರಿಸಿದರು. ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸಲಹೆಗಾರರು, ಸದಸ್ಯರು, ಎಸ್.ಡಿ.ಎಮ್.ಸಿ ಸಮಿತಿಯ ಪದಾಧಿಕಾರಿಗಳು, ಪೋಷಕರು, ಮತ್ತು ವಿದ್ಯಾಭಿಮಾನಿಗಳು ಭಾಗವಹಿಸಿದರು

Related posts

ನ್ಯೂ ವೈಬ್ರೆಂಟ್ ಪ.ಪೂ. ಕಾಲೇಜಿನಲ್ಲಿ ಹಿರೋಷಿಮಾ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಧಮ೯ಸ್ಥಳ ಮಹಾದ್ವಾರದ ಬಳಿ ಪಾದಯಾತ್ರಿಗಳಿಗೆ ಸ್ವಾಗತ

Suddi Udaya

ಫೆ.3-7: ಶ್ರೀ ಕ್ಷೇತ್ರ ಓಡೀಲು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಶಿರ್ಲಾಲು ರಿಕ್ಷಾ ಮಾಲಕ -ಚಾಲಕ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ನಿಡ್ಲೆ ಗ್ರಾಮದ ಕೆದಿಹಿತ್ಲು ಕೆ. ಕಾರ್ತಿಕ್ ರಿಗೆ ಪಿಹೆಚ್‌ಡಿ ಪದವಿ

Suddi Udaya
error: Content is protected !!