ಉಜಿರೆ: “ಸೋತಾಗ ಗೆದ್ದವನನ್ನು ಪ್ರಶಂಸಿಸಿ, ಅವರಿಂದ ಗೆಲುವಿನ ಸಲಹೆಗಳನ್ನು ಕೇಳುವುದು ನಮ್ಮ ಮುಂದಿನ ಗೆಲುವಿನ ಸಾಧನ” ಎಂದು ದಕ್ಷಿಣ ಕನ್ನಡ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್ ಹೇಳಿದರು.
ಇವರು ಡಿ 15 ರಂದು ಶ್ರೀ. ಧ. ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ, ಎಸ್.ಡಿ.ಎಮ್ ಸೆಕೆಂಡರಿ ಶಾಲೆ ಉಜಿರೆ ಹಾಗೂ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (state), ಉಜಿರೆ ವಿದ್ಯಾರ್ಥಿಗಳಿಗೆ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ‘ವಾರ್ಷಿಕ ಕ್ರೀಡೋತ್ಸವ’ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚಿಸುವುದು ಉತ್ತಮ” ಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಹೇಳಿದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮನ್ಮೋಹನ್ ನಾಯಕ್ ಕೆ. ಜಿ, ಸುರೇಶ್, ವಿದ್ಯಾಲಕ್ಷ್ಮಿ ಹಾಗೂ ಎಸ್.ಡಿ.ಎಮ್ ಪಿ.ಡಿ ರಮೇಶ್ ಆಸಿನರಾಗಿದ್ದರು.
ಎಸ್.ಡಿ.ಎಮ್ ಬಿ.ವೈ.ಎನ್.ಎಸ್ ಕಾಲೇಜಿನ ಪಿ.ಡಿ ಧರ್ಮೇದ್ರ ಹಾಗೂ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ. ಎಸ್.ಇ) ಶಾಲೆ ಶಿಕ್ಷಕಿ ಕಲ್ಯಾಣಿ ರಾವ್ ಕಾರ್ಯಕ್ರಮ ನಿರೂಪಿಸಿದರು.