September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಸುಳ್ಳು ವದಂತಿ ಖಂಡಿಸಿ “ನಮ್ಮ ನಡೆ ಧರ್ಮಸ್ಥಳದ ಕಡೆ” : ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ “ಧರ್ಮಸ್ಥಳ ಚಲೊ ಅಭಿಯಾನ”ಧಮ೯ಸ್ಥಳಕ್ಕೆ 400 ಕಾರುಗಳಲ್ಲಿ ಬಂದ ಎರಡು ಸಾವಿರ ಭಕ್ತರು

ಬೆಳ್ತಂಗಡಿ: ಧರ್ಮಸ್ಥಳದ ಬಗ್ಯೆ ನಡೆಯುತ್ತಿರುವ ಅಪಪ್ರಚಾರ ಮತ್ತು ಸುಳ್ಳು ವದಂತಿಗಳನ್ನು ಖಂಡಿಸಿ, ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ನಾಲ್ಕು ನೂರು ಕಾರುಗಳಲ್ಲಿ ಎರಡು ಸಾವಿರ ಮಂದಿ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳು “ಧರ್ಮಸ್ಥಳ ಚಲೊ ಅಭಿಯಾನ”ದಲ್ಲಿ ಆಗಮಿಸಿದರು.ಶನಿವಾರ ಬೆಳಿಗ್ಯೆ 6 ಗಂಟೆಗೆ ಯಲಹಂಕ ಟೋಲ್‌ನಿಂದ ಹೊರಟ ಜಾಥಾ ಅಪರಾಹ್ನ ಮೂರು ಗಂಟೆಗೆ ಧರ್ಮಸ್ಥಳ ತಲುಪಿತು.

“ಅನ್ನಪೂರ್ಣ” ಛತ್ರದಲ್ಲಿ ಅವರು ಭೋಜನ ಸ್ವೀಕರಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಸಂಜೆ ಏಳು ಗಂಟೆಗೆ ದೇವಸ್ಥಾನಕ್ಕೆ ಹೋಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಎಲ್ಲರೂ ನ್ಯಾಯಕ್ಕಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಸ್ಥಾನ ಆವರಣದಲ್ಲಿ ಎಲ್ಲರೂ ಸೇರಿ ಸಾಮೂಹಿಕ ಸಂಕಲ್ಪದೊಂದಿಗೆ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, ಎಸ್.ಡಿ.ಪಿ.ಐ ಹಾಗೂ ಎಡಪಂಥೀಯರ ಕೈವಾಡ ಹಾಗೂ ಷಡ್ಯಂತ್ರದಿಂದ ಎಸ್.ಐ.ಟಿ ಸಮಿತಿಯನ್ನು ರಚಿಸಲಾಗಿದೆ. ಸರ್ವಧರ್ಮೀಯರ ಶ್ರದ್ಧಾಕೇಂದ್ರವಾದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆಧಾರ ರಹಿತ ಆರೋಪ ಹಾಗೂ ಸುಳ್ಳು ವದಂತಿ ಪಸರಿಸಲಾಗುತ್ತಿದೆ. ಯೂಟ್ಯೂಬರ್‌ಗಳು ಮಾಡುವ ಅಪಪ್ರಚಾರದ ಬಗ್ಗೆ ಎಲ್ಲರಿಗೂ ಭಯ ಹಾಗೂ ಆತಂಕವಿದ್ದು, ತಪ್ಪಿತಸ್ಥರ ಮೇಲೆ ಸುಮೊಟೊ ಪ್ರಕರಣ ದಾಖಲಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪವರ್ ಟಿ.ವಿ.ಯ ಆಡಳಿತ ನಿರ್ದೇಶಕ ರಾಕೇಶ್ ಶೆಟ್ಟಿ ಮತ್ತು ಅಲೋಕ್ ಉಪಸ್ಥಿತರಿದ್ದರು.

Related posts

ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲಿನ ಪೊಲೀಸ್ ಹಲ್ಲೆಗೆ ತಾಲೂಕು ವಕೀಲರ ಸಂಘದಿಂದ ಖಂಡನೆ: ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗೆ ಮನವಿ

Suddi Udaya

ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

Suddi Udaya

ಮರೋಡಿಯ ವಸಂತ ಕುಮಾರ್ ಹಾರೋದ್ದು ರವರಿಂದ ದೇಹ ದಾನಕ್ಕೆ ನೋಂದಣಿ

Suddi Udaya

ಇಂದಬೆಟ್ಟು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಆನಂದ ಅಡಿಲು ರವರ ಮನೆಗೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ

Suddi Udaya

ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯದ ಆಶ್ರಯದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟ

Suddi Udaya

ಅಗ್ನಿವೀರ್ ಗೆ ಆಯ್ಕೆಯಾದ ಹತ್ಯಡ್ಕದ ಭರತ್‌ಗೆ ಕಪಿಲ ಕೇಸರಿ ಯುವಕ ಮಂಡಲದಿಂದ ಸನ್ಮಾನ

Suddi Udaya
error: Content is protected !!