April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳಾಲು: ಅಕ್ರಮವಾಗಿ ಮದ್ಯ ಶೇಖರಣೆ: ಧರ್ಮಸ್ಥಳ ಪೊಲೀಸರಿಂದ ದಾಳಿ: ಆರೋಪಿ‌ ಪರಾರಿ

ಬೆಳಾಲು: ಬೆಳಾಲು ಗ್ರಾಮದ ಕಲ್ಲಾಪು ಅಂಗಡಿಯೊಂದರ ಹಿಂಬದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಶೇಖರಿಸಿಟ್ಟ ಅಮಲು ಪದಾರ್ಥವನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡ ಘಟನೆ ಡಿ.15 ರಂದು ನಡೆದಿದೆ.

ಬೆಳ್ತಂಗಡಿ ಬೆಳಾಲು ಗ್ರಾಮದ ಕಲ್ಲಾಪು ಎಂಬಲ್ಲಿರುವ ಅಂಗಡಿಯೊಂದರ ಹಿಂಬದಿಯಲ್ಲಿ ಬೆಳಾಲು ನಿವಾಸಿ ಭಾಸ್ಕರ್ ಎಂಬವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಅಮಲು ಪದಾರ್ಥವನ್ನು ಶೇಖರಿಸಿಟ್ಟು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ, ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅನೀಲ್ ಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿರುತ್ತಾರೆ.

ಈ ವೇಳೆ ಆರೋಪಿಯು ಪರಾರಿಯಾಗಿದ್ದು, ಸ್ಥಳದಲ್ಲಿ ಸುಮಾರು ರೂ 1680/-ಮೌಲ್ಯದ 42 ಮದ್ಯದ ಸ್ಯಾಚೆಟ್ ಗಳು (3.7 ಲೀಟರ್ ) ಕಂಡುಬಂದಿರುತ್ತದೆ. ಸದರಿ ಮದ್ಯದ ಸ್ಯಾಚೆಟ್ ಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 103/2023 ಕಲಂ 32, 34 KE Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮುಂಡಾಜೆ : ಸಂವಿಧಾನ ಜಾಗೃತಿ ಜಾಥಾ

Suddi Udaya

ಕುತ್ಲೂರು ಉ.ಸ.ಹಿ. ಪ್ರಾಥಮಿಕ ಶಾಲೆಯಲ್ಲಿ “ಚಿಣ್ಣರ ಅಂಗಳ” ಉದ್ಘಾಟನೆ

Suddi Udaya

ಕುಕ್ಕೇಡಿ ಗ್ರಾ.ಪಂ. ನಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಲಯನ್ಸ್ ಕ್ಲಬ್ ಬೆಳ್ತಂಗಡಿಯ ವತಿಯಿಂದ ದೀಪಾವಳಿ ಸಂಭ್ರಮ

Suddi Udaya

ಕಳಿಯ ಗ್ರಾ.ಪಂ. ಆಡಳಿತ ಮಂಡಳಿಯಿಂದ ಜಿಲ್ಲಾಧಿಕಾರಿ ಭೇಟಿ, ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಗುರುತಿಸುವಿಕೆಗಾಗಿ ಮನವಿ ಸಲ್ಲಿಕೆ

Suddi Udaya
error: Content is protected !!