September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಸಿರು ಕ್ರಾಂತಿ ರೈತರ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲೂ ರೈತ ಸಂಘಟನೆ ರಚನೆ: ಯುವ ರೈತರನ್ನು ಒಗ್ಗೂಡಿಸುವ ಸಲುವಾಗಿ ರೈತ ಸಂಘವನ್ನು ಸಧೃಡವಾಗಿ ಕಟ್ಟುವ ಉದ್ದೇಶ: ಆದಿತ್ಯ ಕೊಲ್ಲಾಜೆ

ಬೆಳ್ತಂಗಡಿ: ಯಾವುದೇ ಸರಕಾರ ಕೃಷಿಕರಿಗೆ ಪ್ರೋತ್ಸಾಹ ನೀಡಲು ವಿಫಲವಾಗಿದ್ದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರೈತರನ್ನು ಒಗ್ಗೂಡಿಸುವ ಸಲುವಾಗಿ ತಾಲೂಕು,ಗ್ರಾಮ ಮಟ್ಟದಲ್ಲಿ ರೈತ ಸಂಘಟನೆಯನ್ನು ಕಟ್ಟಲಾಗುವುದು ಎಂದು ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯ ಕೊಲ್ಲಾಜೆ ತಿಳಿಸಿದರು.

ಅವರು ಡಿ. 16 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರೈತ ಸಂಘಟನೆಯ ಯುವ ಘಟಕ, ಮಹಿಳಾ ಘಟಕವನ್ನು ಸ್ಥಾಪಿಸಲಾಗುವುದು‌. ಆ ಮುಖೇನಾ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ರೈತ ಸಂಘಟನೆಯಿಂದ ಮಾಡಲಾಗುವುದು. ಡಿ. 21 ರಂದು ಬೆಳ್ತಂಗಡಿಯಲ್ಲಿ ರೈತ ಸಂಘದ ತಾಲೂಕು ಸಮಿತಿ ರಚನೆಯಾಗಲಿದೆ. ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರರವರು ಬೆಳ್ತಂಗಡಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಅವರಿಂದ ರೈತ ಸಂಘದ ಹುಟ್ಟು, ಸಾಗಿಬಂದ ದಾರಿ ಮುಂದೆ ಸಾಗಲಿರುವ ಕುರಿತು ದಿಕ್ಸೂಚಿ ಕಾರ್ಯಗಾರ ನಡೆಯಲಿದೆ ಎಂದರು.

ದ.ಕ ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮ‌ ಮಟ್ಟದಲ್ಲೂ ಸಮಿತಿ ರಚಿಸಿ ರೈತರಿಗೆ ಕೃಷಿ ಉತ್ಪಾದನೆ, ಮೌಲ್ಯ ವರ್ಧನೆ, ಮಾರುಕಟ್ಟೆ ಪರಿಸರ ಸಂರಕ್ಷಣೆ, ತಾಂತ್ರಿಕರಣದ ಬಳಕೆ, ಕಡಿಮೆ ಉತ್ಪಾದನಾ ವೆಚ್ಚದ ಮೂಲಕ ಸುಸ್ಥಿರ ಕೃಷಿ ಬದುಕು, ಆರ್ಥಿಕ ಸಬಲೀಕರಣದ ಮೂಲಕ ಯುವ ಜನತೆಯನ್ನು ಕೃಷಿಯಲ್ಲಿಯೇ ಮತ್ತೆ ತೊಡಗಿಸುವ ಉದ್ದೇಶದಿಂದ ರೈತ ಸಂಘ ರಚನೆಯಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋರ್ಯ, ಬೆಳ್ತಂಗಡಿ ತಾಲೂಕು ಸಂಚಾಲಕ ಚಿದಾನಂದ ಹಾಜರಿದ್ದರು.

Related posts

ಕೊಕ್ಕಡ ಸಿಪಿಐಎಂ ಶಾಖಾ ಕಾರ್ಯದರ್ಶಿ ಅಣ್ಣು ಮೊಗೇರ ನಿಧನ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ

Suddi Udaya

ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ

Suddi Udaya

ಧರ್ಮಸ್ಥಳದಲ್ಲಿ ಯಾಂತ್ರೀಕೃತ ಕೃಷಿಗೆ ಚಾಲನೆ

Suddi Udaya

ಮುಂಡಾಜೆ: ಸೀಟು ಪ್ರದೇಶದಲ್ಲಿ ವಾಲಿ ನಿಂತಿರುವ ವಿದ್ಯುತ್ ಕಂಬ

Suddi Udaya

ಪ್ರಾಥಮಿಕ ವಿಭಾಗದ ಕರಾಟೆ ಪಂದ್ಯಾಟ : ಸುಲ್ಕೇರಿ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!