25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಸಿರು ಕ್ರಾಂತಿ ರೈತರ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲೂ ರೈತ ಸಂಘಟನೆ ರಚನೆ: ಯುವ ರೈತರನ್ನು ಒಗ್ಗೂಡಿಸುವ ಸಲುವಾಗಿ ರೈತ ಸಂಘವನ್ನು ಸಧೃಡವಾಗಿ ಕಟ್ಟುವ ಉದ್ದೇಶ: ಆದಿತ್ಯ ಕೊಲ್ಲಾಜೆ

ಬೆಳ್ತಂಗಡಿ: ಯಾವುದೇ ಸರಕಾರ ಕೃಷಿಕರಿಗೆ ಪ್ರೋತ್ಸಾಹ ನೀಡಲು ವಿಫಲವಾಗಿದ್ದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರೈತರನ್ನು ಒಗ್ಗೂಡಿಸುವ ಸಲುವಾಗಿ ತಾಲೂಕು,ಗ್ರಾಮ ಮಟ್ಟದಲ್ಲಿ ರೈತ ಸಂಘಟನೆಯನ್ನು ಕಟ್ಟಲಾಗುವುದು ಎಂದು ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯ ಕೊಲ್ಲಾಜೆ ತಿಳಿಸಿದರು.

ಅವರು ಡಿ. 16 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರೈತ ಸಂಘಟನೆಯ ಯುವ ಘಟಕ, ಮಹಿಳಾ ಘಟಕವನ್ನು ಸ್ಥಾಪಿಸಲಾಗುವುದು‌. ಆ ಮುಖೇನಾ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ರೈತ ಸಂಘಟನೆಯಿಂದ ಮಾಡಲಾಗುವುದು. ಡಿ. 21 ರಂದು ಬೆಳ್ತಂಗಡಿಯಲ್ಲಿ ರೈತ ಸಂಘದ ತಾಲೂಕು ಸಮಿತಿ ರಚನೆಯಾಗಲಿದೆ. ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರರವರು ಬೆಳ್ತಂಗಡಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಅವರಿಂದ ರೈತ ಸಂಘದ ಹುಟ್ಟು, ಸಾಗಿಬಂದ ದಾರಿ ಮುಂದೆ ಸಾಗಲಿರುವ ಕುರಿತು ದಿಕ್ಸೂಚಿ ಕಾರ್ಯಗಾರ ನಡೆಯಲಿದೆ ಎಂದರು.

ದ.ಕ ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮ‌ ಮಟ್ಟದಲ್ಲೂ ಸಮಿತಿ ರಚಿಸಿ ರೈತರಿಗೆ ಕೃಷಿ ಉತ್ಪಾದನೆ, ಮೌಲ್ಯ ವರ್ಧನೆ, ಮಾರುಕಟ್ಟೆ ಪರಿಸರ ಸಂರಕ್ಷಣೆ, ತಾಂತ್ರಿಕರಣದ ಬಳಕೆ, ಕಡಿಮೆ ಉತ್ಪಾದನಾ ವೆಚ್ಚದ ಮೂಲಕ ಸುಸ್ಥಿರ ಕೃಷಿ ಬದುಕು, ಆರ್ಥಿಕ ಸಬಲೀಕರಣದ ಮೂಲಕ ಯುವ ಜನತೆಯನ್ನು ಕೃಷಿಯಲ್ಲಿಯೇ ಮತ್ತೆ ತೊಡಗಿಸುವ ಉದ್ದೇಶದಿಂದ ರೈತ ಸಂಘ ರಚನೆಯಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋರ್ಯ, ಬೆಳ್ತಂಗಡಿ ತಾಲೂಕು ಸಂಚಾಲಕ ಚಿದಾನಂದ ಹಾಜರಿದ್ದರು.

Related posts

ಉಜಿರೆ: ದ.ಕ.ಜಿ.ಪ.ಕಿ ಪ್ರಾ ಜನಾರ್ಧನ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಗೇರುಕಟ್ಟೆಯ ಅದೀಲ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya

ಸುಲ್ಕೇರಿಮೊಗ್ರು ಶಾಲಾಭಿವೃದ್ಧಿ ಸಮಿತಿಯಿಂದ ಅಳದಂಗಡಿ ಗ್ರಾ.ಪಂ. ನ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆ : ಸಹಕಾರ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ ನಿಧನ

Suddi Udaya

ಬಂದಾರು: ಮೈರೋಳ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ

Suddi Udaya
error: Content is protected !!