ನಡ: “ಸೋತವನಿಗೆ ಮತ್ತೆ ಗೆಲ್ಲುವ ಅವಕಾಶ ಇದೆ. ನಿರಂತರ ಪ್ರಯತ್ನದಿಂದ ಒಬ್ಬ ಸಾಮಾನ್ಯ ವಿದ್ಯಾರ್ಥಿಯು ಒಬ್ಬ ಅಸಾಮಾನ್ಯ ವ್ಯಕ್ತಿಯಾಗಬಹುದು. ಕ್ಷಣಿಕ ಸುಖಕೋಸ್ಕರ ದೀರ್ಘ ಕಾಲದ ಸುಖವನ್ನು ಕಳೆದುಕೊಳ್ಳಬಾರದು. ಭವ್ಯ ಭಾರತವನ್ನು ಮುಂದೊಯ್ಯುವ ಜವಾಬ್ದಾರಿ ವಿದ್ಯಾರ್ಥಿ ಸಮೂಹ ಮೇಲಿದೆ “ಎಂಬುದಾಗಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಅನಂತ ಭಟ್ ಮಚ್ಚಿಮಲೆ ಅಭಿಪ್ರಾಯಪಟ್ಟರು.
ಅವರು ನಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು. ಪಾಣೆ ಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆ ಇಲ್ಲಿಯ ಮುಖ್ಯ ಶಿಕ್ಷಕ ಭೋಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಊರಿನ ಗಣ್ಯ ವ್ಯಕ್ತಿ ಗಳಾದ ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅಜಿತ್ ಆರಿಗ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಯಾಕೂಬ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವಿತ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತಿರ್ಣರಾದ 11 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. .ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಮೇರಿಕಾದ ನರೇಂದ್ರ ನಾಥ್ ಲರ್ನಿಂಗ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ಕೊಡಮಾಡಿಸಲು ಸಹಕರಿಸಿದ ನಡ ಪ್ರೌಢ ಶಾಲಾ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಜಾಹ್ನವಿ, ಮತ್ತು ವಿದ್ಯಾರ್ಥಿಗಳಿಗೆ ಕ್ರೀಡಾ ಮಾರ್ಗದರ್ಶಿಯಾಗಿ ಸಹಕರಿಸಿದ ಅಜಿತ್ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು. ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪಾ ಡಿ. ಈ ಕಾರ್ಯಕ್ರಮ ನಿರ್ವಹಿಸಿದರು. ಅರ್ಥ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ತಮ್ಮ ಮಾತೃ ಶ್ರೀ ಯವರ ನೆನಪಿಗಾಗಿ ಕೊಡಮಾಡಿದ ದತ್ತಿನಿಧಿ ಮತ್ತು ವಿಷಯವಾರು ಉಪನ್ಯಾಸಕರು ಕೊಡಮಾಡುವ ನಗದು ಬಹುಮಾನಗಳ ಪಟ್ಟಿಯನ್ನು ಇತಿಹಾಸ ಉಪನ್ಯಾಸಕರಾದ ಶ್ರೀಮತಿ ಶರ್ಮಿಳಾ ವಾಚಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರ, ಆಟೋಟ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಆಂಗ್ಲ ಭಾಷಾ ಉಪನ್ಯಾಸಕಿ ಚೇತನಿ ಯವರು ನಿರ್ವಹಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು,ತಾಲೂಕು ಮಟ್ಟದ ಮತದಾರರ ಅರಿವು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು, ಹಾಗೂ ಕಾಲೇಜ್ ನ ‘ಸರ್ವೋತ್ತಮ ವಿದ್ಯಾರ್ಥಿ ವಿಜೇತ’ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ವಿದ್ಯಾರ್ಥಿನಿಯರಾದ ಸವಿತಾ, ಪ್ರಾಪ್ತಿ, ಯಕ್ಷಿತಾ, ನಸ್ರಿನಾ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಚಂದ್ರಶೇಖರ್ ಪ್ರಾಸ್ತವಿಕ ವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.ಕನ್ನಡ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿ. ವಿ. ವರದಿ ವಾಚನಗೈದರು. ಅರ್ಥ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ಪಿ. ಯವರು ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಮೋಹನ ಗೌಡ ಕಾರ್ಯಕ್ರಮ ನಿರ್ವಹಣೆ ಗೈದರು.