ಬೆಳ್ತಂಗಡಿ ತಾಲೂಕು 18ನೇಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Suddi Udaya

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ 18ನೇ
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಾಣಿ ಕಾಲೇಜಿನ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ
ಕನಾ೯ಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಸಮ್ಮೇಳನವನ್ನು ನಿವೃತ್ತ ಪ್ರಾಂಶುಪಾಲ
ಪ್ರೊ. ಎ. ಕೃಷ್ಣಪ್ಪ ಪೂಜಾರಿ ಅವರು ವಹಿಸಿದ್ದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತಂದ ಚಾರುಮುಡಿ ಸಂಚಿಕೆಯನ್ನು ಶಾಸಕ ಹರೀಶ್ ಪೂಂಜ ಬಿಡುಗಡೆ ಗೊಳಿಸಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್,ಪ್ರತಾಪಸಿಂಹ ನಾಯಕ್, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸತೀಶ್ಚಂದ್ರ ಎಸ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಬೆಂಗಳೂರು, ಭಾಗವಹಿಸಿದ್ದರು.
ರಾಷ್ಟ್ರಧ್ವಜವನ್ನು ಕೆ. ಹರೀಶ ಕುಮಾರ್ ಶಾಸಕರು, ಕರ್ನಾಟಕ ವಿಧಾನ ಪರಿಷತ್ತು

ಪರಿಷತ್ತು ಧ್ವಜವನ್ನು ಡಾ. ಎಂ. ಪಿ. ಶ್ರೀನಾಥ ಅಧ್ಯಕ್ಷರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ಸಮ್ಮೇಳನ ಧ್ವಜ ವನ್ನುಶ್ರೀ ಡಿ. ಯದುಪತಿ ಗೌಡ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕ ನೇರವೇರಿಸಿದರು.
‌ವೇದಿಕೆಯಲ್ಲಿ ಜಿಲ್ಲಾ ಕಾಯ೯ದಶಿ೯ ರಾಜೇಶ್ವರಿ, ಶ್ರೀಶ ಮುಚ್ಚಿನ್ನಾಯ, ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು, ಕಾಯ೯ದಶಿ೯ಗಳಾದ ಪ್ರಮೀಳಾ, ಕೋಶಾಧಿಕಾರಿ ಮೀನಾಕ್ಷಿ, ಡಾ.
ಮಾಧವ, ಉಮೇಶ್ ಪುತ್ತೂರು ಉಪಸ್ಥಿತರಿದ್ದರು.

ಸ.ಸಂ.ಸ.ಅಧ್ಯಕ್ಷಜಯಾನಂದ ಗೌಡ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು,
ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ ಪ್ರಸ್ತಾವನೆ ಮಾಡಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ ಆಶಯ ನುಡಿಗಳನ್ನಾಡಿದರು.
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಾರ್ಯದರ್ಶಿ,
ರಾಮಕೃಷ್ಣ ಭಟ್ ಬೆಳಾಲು ಧನ್ಯವಾದವಿತ್ತರು.ಮಹಾವೀರ ಜೈನ್ ಮತ್ತು ಶ್ರೀಮತಿ ವಸಂತಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!