ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ 18ನೇ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಸಮಾರೋಪ ಸಮಾರಂಭ ವಾಣಿ ಕಾಲೇಜಿನ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸಂಪನ್ನಗೊಂಡಿತು.
ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಪೂವಪ್ಪ ಕಣಿಯೂರು ಸಮಾರೋಪ ಭಾಷಣ ಮಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಪ್ಪ ಪೂಜಾರಿ ಸಮ್ಮೇಳನದ ಅಧ್ಯಕ್ಷರ ನುಡಿಗಳನ್ನಾಡಿದರು. ಕೆ.ಸಾ.ಪ ದ.ಕ ಜಿಲ್ಲಾ ಅಧ್ಯಕ್ಷ ಡಾ. ಶ್ರೀನಾಥ ಅಧ್ಯಕ್ಷರ ನುಡಿಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಬೆಂಗಳೂರು, ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ಚಿಕಿತ್ಸಾ ಫಾಮ್೯ನ ಮಾಲಕ ಶ್ರೀಶ ಮುಚ್ಚಿನ್ನಾಯ ಭಾಗವಹಿಸಿದ್ದರು. ಸಮಾರಂಭದಲ್ಲಿ ಡಾ. ಕೆ.ಎಂ ಶೆಟ್ಟಿ (ಸಾಹಿತ್ಯ), ಗೋಪಾಲಕೃಷ್ಣ ಕಾಂಚೋಡು (ದೇಶ ಸೇವೆ), ಬೇಬಿ ಪೂಜಾರಿ ಪಿಲ್ಯ (ನಾಟಿ ವೈದ್ಯರು), ಡಾ.ಎಂ. ಜೋಸೆಫ್ (ಶಿಕ್ಷಣ), ಹೈದರಾಲಿ (ಜನಪದ ವಸ್ತು ಸಂಗ್ರಹಕರು) ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕಾಯ೯ದಶಿ೯ ರಾಜೇಶ್ವರಿ, ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಚೊಕ್ಕಾಡಿ, ರಾಜ್ಯ ಸಮಿತಿ ಸದಸ್ಯ ಮಾಧವ ಎಂ.ಕೆ, ಸಂಯೋಜನೆ ಸಮಿತಿ ಅಧ್ಯಕ್ಷ ಜಯಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ, ಕೋಶಾಧಿಕಾರಿ ಧನ೯ಪ್ಪ, ಮಂಗಳೂರು ಘಟಕ ಅಧ್ಯಕ್ಷ ಮಂಜುನಾಥ ರೇವಣ್ಹ್ಕರ್ ಉಪಸ್ಥಿತರಿದ್ದರು.
ವಿಷ್ಣು ಪ್ರಕಾಶ್ ಕಾಯ೯ಕ್ರಮ ನಿರೂಪಿಸಿದರು. ಮೋಹನ್ ಗೌಡ ಕೊಯ್ಯೂರು ಧನ್ಯವಾದವಿತ್ತರು.