ಇಳಂತಿಲ: ಕಾರಿನಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು ಪತ್ತೆ : ಉಪ್ಪಿನಂಗಡಿ ಪೊಲೀಸರಿಂದ ಆರೋಪಿ ಇಳಂತಿಲ ನಿವಾಸಿ ಯಾಸಿರ್ ಸಹಿತ 6.4 ಗ್ರಾಂ ಮಾದಕ ವಸ್ತು ವಶ

Suddi Udaya

ಇಳಂತಿಲ: ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಯವರು ವಾಹನ ತಪಾಸಣೆಯ ನಿಮಿತ್ತ ಕಾರನ್ನು ನಿಲ್ಲಿಸಿದಾಗ ಕಾರಿನಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು ಪತ್ತೆಯಾಗಿದ್ದು ಆರೋಪಿಯನ್ನು ಹಾಗೂ ಅದರಲ್ಲಿ ಇದ್ದ ಅಂದಾಜು ರೂ 13,000/- ಮೌಲ್ಯದ 6.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ವಶಪಡಿಸಿಕೊಂಡ ಘಟನೆ ಡಿ.17 ರಂದು ನಡೆದಿದೆ.

ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ದರ್ಗಾ ಶರೀಫ್ ಬಳಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಜೇಶ್ ಕೆ.ವಿ ಮತ್ತು ಸಿಬ್ಬಂಧಿಯವರು ವಾಹನ ತಪಾಸಣೆಯ ನಿಮಿತ್ತ ಕೆಎ-19-ಎನ್-8139ನೇ ನೊಂದಣಿಯ ಕಾರನ್ನು ನಿಲ್ಲಿಸಿದಾಗ, ಚಾಲಕನು ವಾಹನವನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿರುತ್ತಾನೆ. ಆತನನ್ನು ತಡೆದು ವಿಚಾರಿಸಿದಾಗ ಆತನು ಬೆಳ್ತಂಗಡಿ ಇಳಂತಿಲ ಗ್ರಾಮದ ನಿವಾಸಿ ಯಾಸಿರ್ (29) ಎಂಬುದಾಗಿ ತಿಳಿದಿಬಂದಿದ್ದು, ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಅಂದಾಜು ರೂ 13,000/- ಮೌಲ್ಯದ 6.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಸದರಿ ಕಾರು, ಕಾರಿನಲ್ಲಿದ್ದ ಚಿಕ್ಕ ಎಲೆಕ್ಟ್ರೋನಿಕ್ ಡಿಜಿಟಲ್ ತೂಕ ಮಾಪನ ಸಾಧನ, 01 ಮೊಬೈಲ್ ಮತ್ತು ಎಂ.ಡಿ.ಎಂ.ಎ ಮಾದಕವಸ್ತುವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 168/2023 ಕಲಂ:, U/s-8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!