30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಕೋರಿ ಜಾತ್ರೆಯಲ್ಲಿ ಕೋಣಗಳ ಯಜಮಾನರಿಗೆ ಗೌರವಾರ್ಪಣೆ

ಕೊಕ್ಕಡ: ಡಿ.17 ರಂದು ನಡೆದ ಕೋರಿ ಜಾತ್ರೆಯ ಸಂದರ್ಭದಲ್ಲಿ ಗದ್ದೆಗೆ ಕೋಣಗಳನ್ನು ಇಳಿಸುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಈ ಬಾರಿಯ ಕೋರಿ ಜಾತ್ರೆಯ ಗದ್ದೆಗೆ ಕಳೆಂಜದ ಹರಿಪ್ರಸಾದ್ ಶೆಟ್ಟಿಯವರ ಕಂಬಳದ ಕೋಣಗಳನ್ನು ಸಂಪ್ರದಾಯದಂತೆ ಮೆರವಣಿಗೆಯಲ್ಲಿ ತಂದು ಗದ್ದೆಗೆ ಇಳಿಸಲಾಯಿತು. ಈಗಿನ ಪರಿಸ್ಥಿತಿಯಲ್ಲಿ ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಕೋಣಗಳ ಮಾಲಕರಾದ ಹರಿಪ್ರಸಾದ್ ರೈ ರವರಿಗೆ ಕೊಕ್ಕಡದ ಗುತ್ತಿನ ಮನೆಯ ರತ್ನಾಕರ ಭಂಡಾರಿಯವರ ಮನೆಯ ವಠಾರದಲ್ಲಿ ಕಳೆಂಜ ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ಶ್ರೀಧ‌ರ್ ರಾವ್ ಮತ್ತು ಇತರ ಊರ ಗಣ್ಯರು ಉಪಸ್ಥಿತರಿದ್ದರು.

Related posts

ವೇಣೂರು ಜಿನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್ ಉದ್ಘಾಟನೆ

Suddi Udaya

ಕಬ್ಬಡ್ಡಿ ಪಂದ್ಯಾಟ: ಸ.ಉ.ಹಿ.ಪ್ರಾ. ಶಾಲೆ ಬರೆಂಗಾಯ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಇಂದು ಆನ್ ಸಿಲ್ಕ್ಸ್ ನಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್: ಪ್ರತೀ ಬ್ರ್ಯಾಂಡೆಡ್ ವಸ್ತ್ರಗಳಿಗೆ ಶೇ.35% ರಿಂದ 50% ಡಿಸ್ಕೌಂಟ್ ಸೇಲ್

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಫ್ಯಾನ್ ವಿತರಣೆ

Suddi Udaya

ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಬೆಳ್ತಂಗಡಿ: ಹಳೆಕೋಟೆ ಡಿಸ್ಕೌಂಟ್ ಸೇಲ್ ಬಟ್ಟೆ ಮತ್ತು ಚಪ್ಪಲಿ ಅಂಗಡಿಯವರಿಂದ ವಯನಾಡ್ ನೆರೆ ಸಂತ್ರಸ್ತರಿಗೆ ದಿ‌ನಬಳಕೆ ವಸ್ತುಗಳ ಸಹಾಯಹಸ್ತ

Suddi Udaya
error: Content is protected !!