24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಿಡ್ಲೆ : ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

ನಿಡ್ಲೆ : ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿ ಪ್ರತಿಭಾ ದಿನಾಚರಣೆಯು ಡಿ.16ರಂದು ಕಾಲೇಜು ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ವಹಿಸಿದ್ದರು. ಉದ್ಘಾಟನೆಯನ್ನು ಊರಿನ ಹಿರಿಯರಾದ ಸತ್ಯನಾರಾಯಣ ರಾವ್ ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಕ್ಷೇತ್ರ ಸಮನ್ವಯಾಧಿಕಾರಿ ಗಣೇಶ್ ಐತಾಳ್ ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕಾದ ಗುರಿಯ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು ಮತ್ತು ಪೋಷಕರಿಗೆ ಅವರ ಜವಾಬ್ದಾರಿಯ ಬಗ್ಗೆ ಕಿವಿಮಾತು ಹೇಳಿದರು.

ಮುಖ್ಯ ಶಿಕ್ಷಕರಾದ ಶ್ರೀಮತಿ ಶಾಂತ ಶೆಟ್ಟಿ ವರದಿ ವಾಚಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಮತ್ತು ಮೋಹನ್, ನಿವೃತ್ತ ಮುಖ್ಯ ಶಿಕ್ಷಕರಾದ ರಾಜಗುರು ಹೆಬ್ಬಾರ್, ವಿನಾಯಕ ಜೋಶಿ , ಶ್ರೀಮತಿ ಕಾತ್ಯಾಯಿನಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪುರುಷೋತ್ತಮ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ಯಕ್ಷ ನಾಟ್ಯವನ್ನು ಕಲಿಸುತ್ತಿರುವ ಈಶ್ವರ ಪ್ರಸಾದ್ ಇ.ವಿ.ಇವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ದತ್ತಿ ನಿಧಿ ನೀಡಲಾಯಿತು.

ಶ್ರೀಮತಿ ಶೋಲಿ ಇವರು ಸ್ವಾಗತಿಸಿ, ಶ್ರೀಮತಿ ಸುಚಿತ್ರರವರು ವಂದಿಸಿದ ಕಾರ್ಯಕ್ರಮವನ್ನು ಶರತ್ ಕುಮಾರ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು, ಅತಿಥಿ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು, ಎಸ್ ಡಿ ಎಮ್ ಸಿ ಯ ಎಲ್ಲಾ ಸದಸ್ಯರು, ಪೋಷಕರು, ಪೂರ್ವ ವಿದ್ಯಾರ್ಥಿಗಳು ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿದರು. ಅದರಲ್ಲಿ ಹುಲಿ ವೇಷ ಕುಣಿತ ಮತ್ತು ಯಕ್ಷನಾಟ್ಯ ಗಮನ ಸೆಳೆದವು.

Related posts

ಕೊಯ್ಯೂರು: ಕೊಟ್ಟಿಗೆಗೆ ನುಗ್ಗಿ ಆಡಿನ ಮೇಲೆ ಚಿರತೆ ದಾಳಿ: ಒಂದು ಆಡು ಸಾವು, ಮತ್ತೊಂದು ಆಡು ಚಿರತೆ ಪಾಲು

Suddi Udaya

ಪೆರ್ಲ ಬೈಪಾಡಿ ಸ. ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

Suddi Udaya

ಮಂಜೂಷಾ ವಸ್ತು ಸಂಗ್ರಹಾಲಯವನ್ನು ವಿಶ್ವದಲ್ಲೇ ಅತಿದೊಡ್ಡ ಏಕ ವ್ಯಕ್ತಿ ಸಂಗ್ರಹಾಲಯ ಎಂದು ಗುರುತಿಸಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ವರ್ಗಾವಣೆ

Suddi Udaya

ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣಅವಿರೋಧ ಆಯ್ಕೆ

Suddi Udaya

ಸುಲ್ಕೇರಿಮೊಗ್ರು: ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿ

Suddi Udaya
error: Content is protected !!