ಉಜಿರೆ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸಾನಿಧ್ಯ ಕೌಶಲ್ಯ ತರಬೇತಿ ಕೆಂದ್ರದ ಟ್ರಸ್ಟಿ ಸಿಬ್ಬಂದಿಗಳು ಮತ್ತು ವಿಶೇಷ ವಿದ್ಯಾರ್ಥಿಗಳಿಗಾಗಿ ಕ್ರಿಸ್ಮಸ್ ಆಚರಣೆಯು ಡಿ.18 ರಂದು ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹೋಲಿ ರೆಡಿಮರ್ ಚರ್ಚ್ ನ ವಂದನೀಯ ಫಾದರ್ ವಾಲ್ಟರ್ ಡಿ ಮೆಲ್ಲೋ ಉದ್ಘಾಟಿಸಿ, ಶುಭಹಾರೈಸಿದರು.
ಅಧಕ್ಷತೆಯನ್ನು ಗಣೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹಾಬಲ ಮಾರ್ಲಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ್ , ಮಡಂತ್ಯಾರು ಮಸೀದಿಯ ಧರ್ಮಗುರುಗಳು ಅಬ್ದುಲ್ ರಝಾಕ್ ಹಾಸಿಮ್, ಉಜಿರೆ ಡೆಂಟಲ್ ಕ್ಲಿನಿಕ್ ಡಾ| ದಯಾಕರ, ದಾನಿಗಳು ಮಾಕ್ಸಿ ವಿ ಅಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಗಣೇಶ್ ಸೇವಾ ಟ್ರಸ್ಟ್ ನ ಜತೆ ಕಾರ್ಯದರ್ಶಿ ಪ್ರೊ. ರಾಧಾಕೃಷ್ಣ, ಗೌರವ ಸಲಹೆಗಾರ ಡಾ| ಪ್ರಮೋದ್ ಆರ್ ನಾಯಕ್, ಆಯೋಜಕರಾದ ರೋಶನ್ ಸಿಕ್ವೇರಾ, ಶ್ರೀ ಗಣೇಶ್ ಸೇವಾ ಟ್ರಸ್ಟ್ ನ ಖಜಾಂಚಿ ಜಗದೀಶ್ ಶೆಟ್ಟಿ, ಶ್ರೀ ಗಣೇಶ್ ಸೇವಾ ಟ್ರಸ್ಟ್ ನ ಟ್ರಸ್ಟಿ ಸ್ಟೀವನ್ ಪಿಂಟೋ, ಶ್ರೀ ಗಣೇಶ್ ಸೇವಾ ಟ್ರಸ್ಟ್ ನ ನಿರ್ದೇಶಕ ಮಹಮದ್ ಖಶೀರ್, ಹಾಗೂ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮಕ್ಕಳು ಪೋಷಕರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಸಿಬ್ಬಂದಿಗಳು ಪ್ರಾರ್ಥಿಸಿದರು. ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಸ್ವಾಗತಿಸಿದರು. ರುಬೀನಾ ನಿರೂಪಿಸಿ, ಅಕ್ಷತಾ ಧನ್ಯವಾದವಿತ್ತರು.