April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಮಾಚಾರಿನಲ್ಲಿ ಎಸ್‌ವೈಎಸ್ 30 ನೇ ವಾರ್ಷಿಕ ಪ್ರಚಾರಾರ್ಥ ಕಾರ್ಯಕ್ರಮ

ಉಜಿರೆ; ಕರ್ನಾಟಕ ಸುನ್ನೀ ಯುವಜನ ಸಂಘ (ಎಸ್‌ವೈಎಸ್) ಇದರ 30ನೇ ವರ್ಷಾಚರಣೆಯ
ಇದರ ಉಜಿರೆ ಸರ್ಕಲ್ ಆಶ್ರಯದಲ್ಲಿ ‘ಬಿಲ್ಡಪ್ 2ಕೆ 23’ ಕಾರ್ಯಕ್ರಮ ಮಾಚಾರು ದರ್ಗಾ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಉಜಿರೆ ಸರ್ಕಲ್ ಅಧ್ಯಕ್ಷ ಸಲೀಂ ಕನ್ಯಾಡಿ ವಹಿಸಿದ್ದರು. ಮಾಚಾರು ಜುಮಾ ಮಸ್ಜಿದ್ ಖತೀಬ್ ಮುಹಮ್ಮದ್ ರಫೀಖ್ ಸಖಾಫಿ ಅಲ್ ಹಿಕಮಿ ಉದ್ಘಾಟನೆ ಮಾಡಿದರು. ರಾಜ್ಯ ಸಮಿತಿ ಸದಸ್ಯ ಹಂಝ ಮದನಿ ಗುರುವಾಯನಕೆರೆ ಮುಖ್ಯ ಪ್ರಭಾಷಣ ನಡೆಸಿದರು. ಬೆಳ್ತಂಗಡಿ ಝೋನ್ ಅಧ್ಯಕ್ಷ ಎಂ.ಎ ಕಾಸಿಂ ಮುಸ್ಲಿಯಾರ್ ಮಾಚಾರು ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಸಯ್ಯಿದ್ ಎಸ್‌.ಎಂ ಕೋಯ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಅಧ್ಯಕ್ಷ ಹಾಜೀ ಹೈದರ್ ಮದನಿ ಉಜಿರೆ, ಕೋಶಾಧಿಕಾರಿ ಹಂಝ ಮಾಚಾರು, ಉಪಾಧ್ಯಕ್ಷ ಉಮರ್‌ಕುಂಞಿ ನಾಡ್ಜೆ, ಸುನ್ನೀ ಮ್ಯಾನೇಜ್ಮೆಂಟ್ ಉಜಿರೆ ರೀಜಿನಲ್ ಅಧ್ಯಕ್ಷ ಮುಹಿಯುದ್ದೀನ್ ನಜಾತ್ ಉಜಿರೆ, ಕೋಶಾಧಿಕಾರಿ ಹನೀಫ್ ಮುಸ್ಲಿಯಾರ್ ನಿಡಿಗಲ್, ಮಾಚಾರು ಜುಮಾ ಮಸ್ಜಿದ್ ಅಧ್ಯಕ್ಷ ಬಿ.ಎಂ ಇಲ್ಯಾಸ್, ಎಸ್‌ವೈಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಪೆರ್ದಾಡಿ, ಸದಸ್ಯ ಅಝೀಝ್ ಕಾಜೂರು, ಮುಂಡಾಜೆ ಸರ್ಕಲ್ ಅಧ್ಯಕ್ಷ ಮುಸ್ತಫಾ ಸ‌ಅದಿ ಕಕ್ಕಿಂಜೆ, ಉಜಿರೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಅತ್ತಾಜೆ, ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು, ಇಸ್ಮಾಯಿಲ್ ಸಖಾಫಿ ಮಾಚಾರು, ಬೆಳಾಲು ಜುಮಾ ಮಸ್ಜಿದ್ ಖತೀಬ್ ಬದ್ರುದ್ದೀನ್ ಸಖಾಫಿ ಎಸ್‌ವೈಎಸ್ ಮಾಚಾರು ಯುನಿಟ್ ಅಧ್ಯಕ್ಷ ಇಲ್ಯಾಸ್ ಮದನಿ, ಹಾಗೂ ಉಜಿರೆ ಸರ್ಕಲ್ ಉಪಾಧ್ಯಕ್ಷ ಖಾಲಿದ್ ಕಕ್ಯಾನ, ದ‌ಅ್‌ವಾ ಕಾರ್ಯದರ್ಶಿ ಸಲೀಂ ನಿಡಿಗಲ್, ಇಸಾಬ ಕಾರ್ಯದರ್ಶಿ ಸಲೀಂ ಮಾಚಾರು, ಸಾಂತ್ವನ ಕಾರ್ಯದರ್ಶಿ ಅಶ್ರಫ್ ಎಂ.ಹೆಚ್ ಉಜಿರೆ, ಸೋಷಿಯಲ್ ಕಾರ್ಯದರ್ಶಿ ಶರೀಫ್ ಬೆಳಾಲು ಹಾಗೂ ಸರ್ಕಲ್ ಹಾಗೂ ಯುನಿಟ್ ನಾಯಕರು ಪ್ರತಿನಿಧಿಗಳು ಹಾಗೂ 7 ಯುನಿಟ್‌ಗಳ 180 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್‌ವೈಎಸ್ ಉಜಿರೆ ಸರ್ಕಲ್ ಕೋಶಾಧಿಕಾರಿ ಹಾತಿಬ್ ಉಜಿರೆ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

Related posts

ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya

ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ

Suddi Udaya

ತೆಂಕಕಾರಂದೂರು ಗ್ರಾಮದಲ್ಲಿ ರಾಜರೋಷವಾಗಿ ತಿರುಗಾಡುತ್ತಿರುವ ಚಿರತೆ: ಜನತೆ ಕಂಗಾಲು

Suddi Udaya

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿ ನಾಪತ್ತೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮದ್ದಡ್ಕ  : ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ರಚನೆ: ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್

Suddi Udaya

ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್: ತೋಟದಲ್ಲಿ ಸೊಪ್ಪು ಕಡಿಯಲು ಹೋಗಿದ್ದ ಬಾಲಕೃಷ್ಣ ಶೆಟ್ಟಿ ಮೃತ್ಯು

Suddi Udaya
error: Content is protected !!