September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರ


ವೇಣೂರು: ನಿಗದಿತವಾಗಿ ಕಾಲಕಾಲಕ್ಕೆ ಹೃದಯದ ತಪಾಸಣೆ ನಡೆಸಿ ಸಕಾಲಿಕ ಚಿಕಿತ್ಸೆ ನೀಡಿದಾಗ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗತಜ್ಞ ಡಾ. ಪದ್ಮನಾಭ ಕಾಮತ್ ಹೇಳಿದರು.

ಅವರು ಡಿ.17 ರಂದು ವೇಣೂರಿನಲ್ಲಿ ಭರತೇಶ ಸಮುದಾಯ ಭವನದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಪ್ರಯುಕ್ತ ಜನಮಂಗಲ ಕಾರ್ಯಕ್ರಮದಡಿ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಗ್ರಾಮೀಣ ಪ್ರದೇಶದ ಜನರು ಮಂಗಳೂರಿಗೆ ಬರಲು ವಾಹನದ ಸಮಸ್ಯೆ, ಮಾಹಿತಿಯ ಕೊರತೆ ಮೊದಲಾದ ಅನೇಕ ಸಮಸ್ಯೆಗಳಿರುತ್ತವೆ. ಆದರೂ, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಆಧುನಿಕ ಯುಗದಲ್ಲಿ  ಸಕಾಲಿಕ ಚಿಕಿತ್ಸೆ ಲಭಿಸದೆ ತೊಂದರೆ ಆಗಬಾರದು ಎಂದು ಕೆ.ಎಂ.ಸಿ. ಆಸ್ಪತ್ರೆ ಅನೇಕ ಸೇವಾ ಯೋಜನೆಗಳನ್ನು ರೂಪಿಸಿದೆ. ಎಲ್ಲರೂ ಇದರ ಸದುಪಯೋಗ  ಪಡೆಯಬೇಕೆಂದು ಅವರು ಸಲಹೆ ನೀಡಿದರು.


ತನ್ನ ತಂದೆ ನಾರಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಹಲವು ವರ್ಷಗಳಲ್ಲಿ ಸೇವೆ ಸಲ್ಲಿಸಿರುವುದರಿಂದ ವೇಣೂರು ಪರಿಸರದ ಜನರೆಲ್ಲ ತಮ್ಮ ಕುಟುಂಬದವರಿಗೆ ಆಪ್ತರೂ, ಆತ್ಮೀಯರೂ ಆಗಿದ್ದಾರೆ ಎಂದು ಧನ್ಯತೆಯಿಂದ ಸ್ಮರಿಸಿದರು.
ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಮತ್ತು ಕೆ.ಎಂ.ಸಿ. ಆಸ್ಪತ್ರೆಯ ಡಾ. ದೀಪಕ್ ಮಡಿ ಹಾಗೂ ಡಾ. ಆನಂದ ಹೆಗ್ಡೆ ಶುಭಾಶಂಸನೆ ಮಾಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು.
ಡಾ. ಶೌರ್ಯ ಬೆನರ್ಜಿ, ಡಾ. ದಿತೇಶ್, ಎಂ. ಡಾ. ಪ್ರಣೀತಾ, ಡಾ. ಶಂಕರನ್ ನಂಬೂದಿರಿ ಉಪಸ್ಥಿತರಿದ್ದರು.
ಡಾ. ಜಗದೀಶ ಚೌಟ, ಡಾ. ಶಾಂತಿಪ್ರಸಾದ್, ಡಾ. ಪೌಸ್ಟಿಲ್ ಅಜಿಲ ಮತ್ತು ಡಾ. ಆಶೀರ್ವಾದ್, ಎಂ.ಪಿ. ಶಿಬಿರದ ಆಯೋಜನೆಯಲ್ಲಿ ಸಹಕರಿಸಿದರು.
ಮಸ್ತಕಾಭಿಷೇಕ ಸಮಿತಿಯ ಪ್ರಧಾನಕಾರ್ಯದರ್ಶಿ ಪ್ರವೀಣ್‌ಕುಮಾರ್ ಇಂದ್ರ ಸ್ವಾಗತಿಸಿದರು. ಮಹಾವೀರ್ ಜೈನ್ ಮೂಡುಕೋಡಿಗುತ್ತು ಧನ್ಯವಾದವಿತ್ತರು.

Related posts

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಬೆಳ್ತಂಗಡಿ ಪ್ರಾ.ಕೃ.ಪ.ಸ. ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಆರಂಬೋಡಿ: ಹನ್ನೆರಡುಕವಲು ರಸ್ತೆ ಅವ್ಯವಸ್ಥೆ, ದುರಸ್ಥಿಗೆ ಗ್ರಾಮಸ್ಥರ ಆಗ್ರಹ, ಗ್ರಾಮ ಪಂಚಾಯತ್ ಗೆ ಮನವಿ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ: ರೂ.571 ಕೋಟಿ ವಾರ್ಷಿಕ ವ್ಯವಹಾರ, ರೂ.1.53 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಟ್

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಯಾಂತ್ರಿಕೃತ ಭತ್ತ ಕೃಷಿಗೆ ಚಾಲನೆ

Suddi Udaya

ಪೆರಲ್ದಾರಕಟ್ಟೆ ಬದ್ರೀಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya
error: Content is protected !!