ನಾಳ : ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸೇವೆಯಾಟ, ಸಭಾ ಕಾರ್ಯಕ್ರಮ ಹಾಗೂ ಪ್ರಥಮ ಬಯಲಾಟ ಡಿ.17 ರಂದು ನಾಳ ದೇವಸ್ಥಾನದ ರಥ ಬೀದಿಯಲ್ಲಿ ಜರುಗಿತು.
ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಸಂತ ಮಜಲು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹಿಂದು ಸಂಘಟನೆ,ಧಾರ್ಮಿಕ ಆಚರಣೆ ಹಾಗೂ ಪೌರಾಣಿಕ ಪ್ರಸಂಗ ಕಥೆಗಳನ್ನು ಕಲಾಭಿಮಾನಿ ಉಣಬಡಿಸುವ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಜೊತೆಯಲ್ಲಿ 3 ನೇ ಪಾದಾರ್ಪಣೆ ಗೈಯುವ ಮೇಳವು ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು.
ವಿಶೇಷ ಆತಿಥಿಯಾಗಿ ದ.ಕ.ಬಾ.ಜ.ಪ. ಕಾರ್ಯಕಾರಿಣಿ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ ಯಕ್ಷಗಾನ ಕಲಾಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.ಈ ಕಷ್ಟ ಸಂದರ್ಭದಲ್ಲೂ ಕಲಾವಿದರ ಬದುಕು ಕೂಡಾ ಕಷ್ಟಕರವಾಗಿದೆ. ಇಂತಹ ದಿನಗಳಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನದ ಮೇಳವನ್ನು ನಡೆಸುವ ವೇ.ಮೂ.ರಾಘವೇಂದ್ರ ಅಸ್ರಣ್ಣ ಸಾಧನೆಯನ್ನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿ, ಮೇಳದ ಯಶಸ್ಸಿಗೆ ಸಹಕರಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಗೇರುಕಟ್ಟೆ,ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ,ಕಳಿಯ ಬದಿನಡೆ ದೈವಸ್ಥನಾದ ಜಾತ್ರಾ ಮಹೋತ್ಸವ ಗೌರವ ಸಲಹೆ ಗಾರರ ಸುರೇಶ್ ಕುಮಾರ್ ಆರ್.ಎನ್.ಗೇರುಕಟ್ಟೆ ಉಪಸ್ಥಿತರಿದ್ದು ಶುಭ ಹಾರೈಸಿದರು. ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಆಂಭಾ ಆಳ್ವ ನಾಳ,ದಿನೇಶ್ ಗೌಡ ಕಲಾಯಿತೊಟ್ಟು, ರಬ್ಬರ್ ಸೊಸೈಟಿ ವ್ಯವಸ್ಥಾಪಕ ಅಶೋಕ ಆಚಾರ್ಯ ಗಂಪದಡ್ಡ,ನಾಳ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಲೋಕೇಶ್ ಎನ್,ಮಂಡಳಿ ಸದಸ್ಯರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದರು.
ಮೇಳದ ಸಂಚಾಲಕ ಪ್ರತಿನಿಧಿ ಮೋಹನ ಕಲಾಂಬಾಡಿ,ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಗೌಡ ಕೋಳ್ತಿಗೆ, ಮೇಳದ ಕಲಾವಿದರು,ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಟ್ಟಿ, ಸಿಬ್ಬಂದಿಗಳು ಹಾಗೂ ಆಯ್ಯಪ್ಪ ವೃತಧಾರಿಗಳು ಸಹಕರಿಸಿದರು.
ನಾಳ ಭಜನಾ ಮಂಡಳಿ ಸದಸ್ಯರ ಕುಣಿತದ ಭಜನೆ ಯೊಂದಿಗೆ ಯಕ್ಷಗಾನ ಮೇಳದ ದೇವರ ವಿಗ್ರಹವನ್ನು ಚೌಕಿಗೆ ಕೊಂಡೊಯ್ಯಲಾಯಿತು.
ಈ ವರ್ಷದ ಪ್ರಥಮ ಸೇವೆಯಾಟ “ಪಾಂಡವಾಶ್ವಮೇಧ ಮತ್ತು ಸರ್ಪಸಿರಿಮುಡಿ”ಬಯಲಾಟವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದರು.
ಮೇಳದ ಪ್ರಬಂಧಕ ರಾಘವ ಹೆಚ್,ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ಕೇಲ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ಮೇಳದ ಸಂಚಾಲಕರು ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಆಸ್ರಣ್ಣರು ಧನ್ಯವಾದವಿತ್ತರು.