September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಗುರುವಾಯನಕೆರೆಯಲ್ಲಿ ಹೊಟೇಲ್ ರೇಸ್ ಇನ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭ

ಗುರುವಾಯನಕೆರೆ: ಗುರುವಾಯನಕೆರೆ ಬಸ್‌ ನಿಲ್ದಾಣದ ಬಳಿ ನೂತನವಾಗಿ ಪ್ರಾರಂಭಿಸಿದ ಹೊಟೇಲ್ ರೇಸ್ ಇನ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭವು ಡಿ.19 ರಂದು ನಡೆಯಿತು.

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನ ವಂ|ಫಾ| ವಾಲ್ಟರ್ ಡಿಮೆಲ್ಲೊ ಉದ್ಘಾಟಿಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ನ ಪ್ರಧಾನ ಧರ್ಮಗುರು ವಂ|ಫಾ| ಸ್ಟಾನಿ ಗೋವಿಯಸ್ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ವಸಂತ ಬಂಗೇರ, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್,ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ,ಮಂಗಳೂರು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ , ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಬಿಲ್ಡರ್ ಅಶ್ವಿನ್ ಪಿರೇರಾ ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ವಿಜಯ್ ಡಿ ಕುನ್ಹ ಮತ್ತು ಜೇನ್ ಡಿ ಕುನ್ಹ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು. ಹಳ್ಳಿಮನೆ ಪ್ರವೀಣ್ ಫೆರ್ನಾಂಡೀಸ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ನೆಲ್ಸನ್ ಕಾರ್ಯಕ್ರಮ ನಿರೂಪಿಸಿದರು.

ವಿಶೇಷತೆಗಳು: ಸುಂದರ ಬಾಲ್ಕನಿ ಒಳಗೊಂಡ ವಿಸ್ತಾರ ಕೊಠಡಿಗಳು, 300ಕ್ಕೂ ಅಧಿಕ ಆಸನ ವ್ಯವಸ್ಥೆಗೊಳಿಸಬಹುದಾದ ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ, ಫ್ಯಾಮಿಲಿ ಬಾರ್ ಹಾಗೂ ರೆಸ್ಟೋರೆಂಟ್, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಇರಲಿದೆ.

Related posts

ತೀರಾ ಹದಗೆಟ್ಟ ಮಚ್ಚಿನ ಪುರುಷರ ಮಜಲು ಕಲಾಯಿ ರಸ್ತೆ : ಶಾಲಾ ಮಕ್ಕಳ ಪರದಾಟ; ದುರಸ್ತಿಗೆ ಸ್ಥಳೀಯರ ಒತ್ತಾಯ

Suddi Udaya

ಉಜಿರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ

Suddi Udaya

ಎಸ್‌ಡಿಪಿಐ ತೆಂಕಕಾರಂದೂರು ವತಿಯಿಂದ ಪೆರಲ್ದಾರಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ರವರ ಭೇಟಿ

Suddi Udaya

ಇಂದಬೆಟ್ಟು: ಕಲ್ಲಾಜೆ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಜ.27,30: ಕೊಕ್ಕಡ ಮಾಯಿಲಕೋಟೆ ಸೀಮೆ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮತ್ತು ವಾರ್ಷಿಕ ನೇಮೋತ್ಸವ

Suddi Udaya
error: Content is protected !!