April 2, 2025
ಅಪರಾಧ ಸುದ್ದಿ

ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕೆಡವಿದ ಪ್ರಕರಣ: ಶಿಬಾಜೆಯ ಮಹಿಳೆಯಿಂದ ಪೊಲೀಸರಿಗೆ ದೂರು

ಶಿಬಾಜೆ: ನಮ್ಮ ಪಟ್ಟಾ ಜಮೀನಿಗೆ ಸೇರಿದ ಜಾಗದಲ್ಲಿದ್ದ ನಮ್ಮ ಅಂಗಡಿ ಕಟ್ಟಡವನ್ನು ರಾತ್ರಿ ಸಮಯ ಕೆಡವಿ ಹಾಕಿರುವುದಾಗಿ ಶಿಬಾಜೆ ಗ್ರಾಮದ ಅರಂಪಾದೆ ಶ್ರೀಮತಿ ಲತಾ ಪಿ.ಎಸ್ ಅವರು ಟಿ.ಕೆ ಮ್ಯಾಥ್ಯು ಮತ್ತಿತರರ ಮೇಲೆ ಆರೋಪ ಹೊರಿಸಿ ಡಿ.20ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ನಮ್ಮ ವಶದಲ್ಲಿದ್ದ ಪಟ್ಟಾ ಜಮೀನಿನ ಲಗ್ತಿ ಜಾಗದಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದ ಸುತ್ತ ಅವರು ಡಿ.14ರಂದು ಬೇಲಿ ನಿರ್ಮಾಣ ಮಾಡಿದ್ದರು. ಸದ್ರಿ ಬೇಲಿಯನ್ನು ನಾನು ಮತ್ತು ನನ್ನ ಗಂಡ ತೆರವುಗೊಳಿಸಿದ್ದೆವು. ಇದನ್ನು ತಿಳಿದ ಅವರು ಡಿ.19ರಂದು ಬೆಳಗ್ಗೆ ಅನಾವಶ್ಯಕವಾಗಿ ತಗಾದೆ ತೆಗೆದು ನಮಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಠಾಣೆಗೆ ದೂರು ನೀಡಿದ್ದೇವೆ. ಇದನ್ನು ತಿಳಿದ ಅವರು ಡಿ.19ರಂದು ತಡರಾತ್ರಿ ಅಂಗಡಿ ಕಟ್ಟಡ ಇರುವ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕಡವುತ್ತಿದ್ದ ಸಂದರ್ಭ ಆಕ್ಷೇಪಿಸಿದ ನಮಗೆ ಜೀವಬೆದರಿಕೆ ಹಾಕಿರುವುದಾಗಿ ಲತಾ ಪಿ.ಎಸ್ ಡಿ.2೦ರಂದು ಧರ್ಮಸ್ಥಳ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ.

Related posts

ಜೈನ್ ಪೇಟೆ ಬಳಿ ಹಾಲು ಸಾಗಾಟದ ಟ್ಯಾಂಕರ್ ಗೆ ಟೆಂಪೋ ಹಿಂದಿನಿಂದ ಡಿಕ್ಕಿ

Suddi Udaya

ಬೆಳ್ತಂಗಡಿ : ಅಕ್ರಮವಾಗಿ ಲಾರಿಯಲ್ಲಿ ಮರ ಸಾಗಾಟ ಪತ್ತೆ : ಮಂಗಳೂರು ಅರಣ್ಯ ಸಂಚಾರಿ ದಳದಿಂದ ಕಾರ್ಯಾಚರಣೆ

Suddi Udaya

ಧರ್ಮಸ್ಥಳ ಅಜೆಕುರಿ ಅಕ್ರಮ ಮರಳು ಅಡ್ಡೆಗೆ ಗಣಿ ಇಲಾಖೆ ದಾಳಿ: ಸ್ಥಳದಲ್ಲಿದ್ದ ನಾಲ್ಕು ಬೋಟ್ ಮತ್ತು ಮರಳು ವಶಕ್ಕೆ

Suddi Udaya

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ನಾಲ್ವರ‌ ಮೇಲೆ ಪ್ರಕರಣ ದಾಖಲು

Suddi Udaya

ನ್ಯಾಯಾಲಯದ ವಿಚಾರಣೆ ಹಾಜರಾಗದೆ 56 ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ: ಕುಟುಂಬವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು ಮರಣ ಹೊಂದಿದ್ದ ಆರೋಪಿ

Suddi Udaya
error: Content is protected !!