26.1 C
ಪುತ್ತೂರು, ಬೆಳ್ತಂಗಡಿ
March 31, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿ

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ: ಧರ್ಮಸ್ಥಳಕ್ಕೆ ತನ್ನ ಸ್ನೇಹಿತೆಯರ ಜೊತೆ ಯಾತ್ರಾರ್ಥಿಗಳಾಗಿ ಬಂದವರು, ಸುಬ್ರಮಣ್ಯಕ್ಕೆ ಹೋಗಲು ಧರ್ಮಸ್ಥಳ ಕೆಎಸ್‌ ಆರ್‌ ಟಿ ಸಿ ಬಸ್ ನಿಲ್ದಾಣದ ಬಳಿ ಸಂಜೆ ನಿಂತುಕೊಂಡಿದ್ದಾಗ, ಜನಸಂದಣಿಯಲ್ಲಿ ಯಾತ್ರಾರ್ಥಿಯ ಕೈಯಲ್ಲಿದ್ದ ಮಾಂಗಲ್ಯ ಸರವನ್ನು ಇರಿಸಿದ ಪರ್ಸ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡ ಘಟನೆ ಡಿ.18 ರಂದು ನಡೆದಿದೆ.

ಉತ್ತರ ಬೆಂಗಳೂರು ಪಲನಿ ಮುದಲಿಯಾರ್‌ ಸ್ಟ್ರೀಟ್‌, ಹಲಸೂರು ನಿವಾಸಿ ಶ್ರೀದೇವಿ (39ವ) ಎಂಬವರ ದೂರಿನಂತೆ, ಡಿ.18 ರಂದು ಬೆಳಿಗ್ಗೆ ಧರ್ಮಸ್ಥಳಕ್ಕೆ ತನ್ನ ಸ್ನೇಹಿತೆಯರ ಜೊತೆ ಯಾತ್ರಾರ್ಥಿಗಳಾಗಿ ಬಂದವರು, ಬಳಿಕ ಸುಬ್ರಮಣ್ಯಕ್ಕೆ ಹೋಗಲು ಧರ್ಮಸ್ಥಳ ಕೆಎಸ್‌ ಆರ್‌ ಟಿ ಸಿ ಬಸ್ ನಿಲ್ದಾಣದ ಬಳಿ ಸಂಜೆ ನಿಂತುಕೊಂಡಿದ್ದಾಗ, ಜನಸಂದಣಿಯಲ್ಲಿ ಮಹಿಳೆಯ ಕೈಯಲ್ಲಿದ್ದ ಮಾಂಗಲ್ಯ ಸರವನ್ನು ಇರಿಸಿದ ಪರ್ಸ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಕಳವಾದ ಮಾಂಗಲ್ಯ ಸರದ ಅಂದಾಜು ಮೌಲ್ಯ ರೂ. 2,00,000/ ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 109/2023 ಕಲಂ:379 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರ ಪತ್ತೆಯಾಗಿ ಪೊಲೀಸರ ಮನವಿ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ನಿಂದ ಕನ್ಯಾನ ಸದಾಶಿವ ಶೆಟ್ಟಿ ರವರಿಗೆ ಸನ್ಮಾನ

Suddi Udaya

ರಾಜ್ಯಮಟ್ಟದ ಯುವಸಂಸತ್ತು ಸ್ಪರ್ಧೆ: ಎಸ್.ಡಿ.ಎಂ. ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಟಿ.ಡಿ ರಾಘವೇಂದ್ರರವರ ಮಾತೃಶ್ರೀ ನಾಗರತ್ನಮ್ಮ ನಿಧನ

Suddi Udaya
error: Content is protected !!