26.1 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಂಡೋ ಪೀಡಿತ ಮಗುವಿನ ಚಿಕಿತ್ಸೆಗೆ ನೇರವಾದ ರಕ್ಷಾಸಮಿತಿ ಸದಸ್ಯ ಕರೀಮ್‌ ಗೇರುಕಟ್ಟೆ

ಬೆಳ್ತಂಗಡಿ: ಕಾಸರಗೋಡು ಕುಂಬ್ಳೆ ನಿವಾಸಿ ಶ್ರೀಮತಿ ಉಷಾ ಉಮೇಶ್ ದಂಪತಿಗಳ ಪುತ್ರಿ ಮೂರು ವರ್ಷ ಪ್ರಾಯದ ಕೀರ್ತನ್‌ರಿಗೆ ಎಂಡೋಸಲ್ಪಾನ್ ಬಾಧಿತ ಅಂಗವಿಕಲತೆ ಹೊಂದಿದ್ದು ಅತೀ ಬಡ ಕುಟುಂಬದವರಾದ ಇವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ಬಂದಿದ್ದರು. ಆದರೆ ಇವರನ್ನು ವೆನ್ಲಾಕ್ ನಲ್ಲಿ ನಿರ್ಲಕ್ಷಿಸಿ ದಾಖಲಿಸಿಕೊಂಡಿರಲಿಲ್ಲ.


ಸಾಮಾಜಿಕ ಕಾರ್ಯಕರ್ತ ಇರ್ಷಾದ್ ಕಿಲ್ಲೂರು ಹಾಗೂ ನಾರಾಯಣ ಕಿಲ್ಲೂರು ಬೇರೊಬ್ಬ ರೋಗಿಯನ್ನು ವೆನ್ಲಾಕ್ ಗೆ ತನ್ನ ವಾಹನದಲ್ಲಿ ಕರೆದುಕೊಂಡು ಬಂದು ದಾಖಲಿಸಿದ ನಂತರ, ಅಸಹಾಯಕರಾಗಿ ಹೊರಗೆ ಕುಳಿತುಕೊಂಡು ಉಷಾ ಉಮೇಶ್ ಅಳುತ್ತಿದ್ದದ್ದನ್ನು ನೋಡಿ ವಿಚಾರಿಸಿದಾಗ ವಿಷಯ ತಿಳಿದುಕೊಂಡು ಕೂಡಲೇ ಇರ್ಷಾದ್ ಬೆಳ್ತಂಗಡಿಯ ಕಾಂಗ್ರೆಸ್ ವಿದಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅವರ ಮಾರ್ಗದರ್ಶನದಂತೆ ಜಿಲ್ಲಾಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರಾದ ಗೇರುಕಟ್ಟೆ ಅಬ್ದುಲ್ ಕರೀಮ್ ರವರನ್ನು ಸಂಪರ್ಕಿಸಿದಾಗ, ಕೂಡಲೇ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳಿಗೆ ಈ ಮಗುವನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು. ತಕ್ಷಣ ಈ ಮಗುವನ್ನು ದಾಖಲಿಸಿಕೊಂಡರೂ ಐಸಿಯು ಬೆಡ್ ಇಲ್ಲ ಎಂಬ ಸಬೂಬು ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದರೂ ಪುನಃ ಕರೀಮ್ ಕರ್ತವ್ಯದಲ್ಲಿರುವ ವೈದ್ಯರನ್ನು ಸಂಪರ್ಕಿಸಿದಾಗ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ತುರ್ತು ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ರಕ್ಷಿತ್ ಶಿವರಾಮ್, ಅಬ್ದುಲ್ ಕರೀಮ್, ಇರ್ಷಾದ್ ಕಿಲ್ಲೂರು, ನಾರಾಯಣ ಕಿಲ್ಲೂರು ರವರಿಗೆ ಈ ಮಗುವಿನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಕಲ್ಲಾಜೆ-ಇಂದಬೆಟ್ಟು ನವ ಭಾರತ್ ಗೆಳೆಯರ ಬಳಗದ ವತಿಯಿಂದ ಆಟಿಡೊಂಜಿ ದಿನ ಹಾಗೂ ವಿದ್ಯಾನಿಧಿ ವಿತರಣಾ ಸಮಾರಂಭ

Suddi Udaya

ಪಡಂಗಡಿ ಹಾಗೂ ಕನ್ನಡಿಕಟ್ಟೆ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಇಂದು ಕಾಶಿ ಬೆಟ್ಟು ನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಗುರುವಾನಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪದಗ್ರಹಣ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ: ಹೊರೆಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ, ಧ್ವಜಾರೋಹಣ

Suddi Udaya

ವೇಣೂರು: ಅಕ್ರಮವಾಗಿ ಗಾಂಜಾ ಸಾಗಾಟ,ಆರೋಪಿ ಬಂಧನಮೋಟಾರ್ ಸೈಕಲ್ ಹಾಗೂ ರೂ. 37 ಸಾವಿರದ 500 ಗ್ರಾಂ ಗಾಂಜಾ ವಶ ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya
error: Content is protected !!