25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕೆಡವಿದ ಪ್ರಕರಣ: ಶಿಬಾಜೆಯ ಮಹಿಳೆಯಿಂದ ಪೊಲೀಸರಿಗೆ ದೂರು

ಶಿಬಾಜೆ: ನಮ್ಮ ಪಟ್ಟಾ ಜಮೀನಿಗೆ ಸೇರಿದ ಜಾಗದಲ್ಲಿದ್ದ ನಮ್ಮ ಅಂಗಡಿ ಕಟ್ಟಡವನ್ನು ರಾತ್ರಿ ಸಮಯ ಕೆಡವಿ ಹಾಕಿರುವುದಾಗಿ ಶಿಬಾಜೆ ಗ್ರಾಮದ ಅರಂಪಾದೆ ಶ್ರೀಮತಿ ಲತಾ ಪಿ.ಎಸ್ ಅವರು ಟಿ.ಕೆ ಮ್ಯಾಥ್ಯು ಮತ್ತಿತರರ ಮೇಲೆ ಆರೋಪ ಹೊರಿಸಿ ಡಿ.20ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ನಮ್ಮ ವಶದಲ್ಲಿದ್ದ ಪಟ್ಟಾ ಜಮೀನಿನ ಲಗ್ತಿ ಜಾಗದಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದ ಸುತ್ತ ಅವರು ಡಿ.14ರಂದು ಬೇಲಿ ನಿರ್ಮಾಣ ಮಾಡಿದ್ದರು. ಸದ್ರಿ ಬೇಲಿಯನ್ನು ನಾನು ಮತ್ತು ನನ್ನ ಗಂಡ ತೆರವುಗೊಳಿಸಿದ್ದೆವು. ಇದನ್ನು ತಿಳಿದ ಅವರು ಡಿ.19ರಂದು ಬೆಳಗ್ಗೆ ಅನಾವಶ್ಯಕವಾಗಿ ತಗಾದೆ ತೆಗೆದು ನಮಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಠಾಣೆಗೆ ದೂರು ನೀಡಿದ್ದೇವೆ. ಇದನ್ನು ತಿಳಿದ ಅವರು ಡಿ.19ರಂದು ತಡರಾತ್ರಿ ಅಂಗಡಿ ಕಟ್ಟಡ ಇರುವ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕಡವುತ್ತಿದ್ದ ಸಂದರ್ಭ ಆಕ್ಷೇಪಿಸಿದ ನಮಗೆ ಜೀವಬೆದರಿಕೆ ಹಾಕಿರುವುದಾಗಿ ಲತಾ ಪಿ.ಎಸ್ ಡಿ.2೦ರಂದು ಧರ್ಮಸ್ಥಳ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ.

Related posts

ಪಿಕಪ್ ಗೂಡ್ಸ್ ವಾಹನ ಕಳ್ಳತನ ಪ್ರಕರಣ: ಆರೋಪಿಗಳನ್ನು ಬಂಧಿಸಿದ ಪೊಲೀಸರು

Suddi Udaya

ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ: ಮಿತ್ತಬಾಗಿಲು ನಿವಾಸಿ ಕಬೀರ್ ಬಂಧನ

Suddi Udaya

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ನಾರಾವಿಯ ಮಹಿಳೆ ಮೃತ್ಯು

Suddi Udaya

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ನಾಲ್ವರ‌ ಮೇಲೆ ಪ್ರಕರಣ ದಾಖಲು

Suddi Udaya

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಶವ ಎಸೆದ ಪ್ರಕರಣ: ಫಲ ನೀಡದ ಕಾರ್ಯಚರಣೆ

Suddi Udaya
error: Content is protected !!