ಬಳಂಜ: ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆ ಇದರ ವರ್ಷಾವಧಿ ಜಾತ್ರೋತ್ಸವ ಹಾಗೂ ಸಾರ್ವಜನಿಕ ಆಶ್ಲೇಷ ಬಲಿ ಪೂಜೆ, ನಾಗತಂಬಿಲ ಸೇವೆ, ದುರ್ಗಾ ನಮಸ್ಕಾರ ಪೂಜೆ, ದೊಡ್ಡ ರಂಗಪೂಜೆಯು ಡಿ.26 ರಿಂದ 27 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಡಿ.26ರಂದು ಬೆಳಿಗ್ಗೆ ವೈದಿಕ ವಿಧಿ ವಿಧಾನಗಳು, ಮಧ್ಯಾಹ್ನ ಸಾನಿಧ್ಯ ದೇವರ ಮಹಾಪೂಜೆ, ಗಂಧ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಾಯಂಕಾಲ ದೈವದ ಭಂಡಾರ ಇಳಿಯುವುದು ಮತ್ತು ದುರ್ಗಾ ನಮಸ್ಕಾರ ಪೂಜೆ, ಸಿರಿದೇವಿಗೆ ವಿಶೇಷ ಪೂಜೆ, ದೊಡ್ಡ ರಂಗಪೂಜೆ, ವ್ಯಾಘ್ರಚಾಮುಂಡಿ ನೇಮೋತ್ಸವ, ದೇವರ ಬಲಿ ಉತ್ಸವ, ದೈವ ದೇವರ ಭೇಟಿ, ವಸಂತ ಮಂಟಪ ಪೂಜೆ, ಅನ್ನಸಂತರ್ಪಣೆ. ರಾತ್ರಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಮತ್ತು ಪಂಚಶ್ರೀ ಭಜನಾ ಮಂಡಳಿ ಬಳಂಜ ಹಾಗೂ ಸ್ವಾತಿ ಮ್ಯೂಸಿಕಲ್ಸ್ ಕಾರ್ಯಾಣ ಇವರಿಂದ ಹಾಗೂ ಇತರ ಭಜನಾ ಮಂಡಳಿಗಳ ಭಜನೋತ್ಸವ ನಡೆಯಲಿದೆ.
ರಾತ್ರಿ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆ ಶಿವಪ್ರಸಾದ್ ಅಜಿಲರು ವಹಿಸಲಿದ್ದಾರೆ. ಶಾಸಕ ಹರೀಶ್ ಪೂಂಜ ಧಾರ್ಮಿಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು, ಕುದ್ರೋಳಿ ಶ್ರೀ ನಾರಾಯಣ ಗುರುಸ್ವಾಮಿ ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಧರ್ಮದರ್ಶಿ ಜಯ ಸಾಲಿಯಾನ್ ತಿಳಿಸಿರುತ್ತಾರೆ.
“ಚಿಲ್ಲರೆ ಕಾಸ್ ದಾಯೆ”: ರಾತ್ರಿ ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಅಭಿನಯದ ಅನಂತ್ ಎಸ್. ಇರ್ವತ್ರಾಯ ತಂಗೋಯಿ ರಚನೆದ “ಚಿಲ್ಲರೆ ಕಾಸ್ ದಾಯೆ…” ಸಾಂಸಾರಿಕ ಹಾಸ್ಯ ತುಳುನಾಟಕ ನಡೆಯಲಿದೆ.