32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.25-26: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ

ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ ಡಿ.25 ಮತ್ತು 26ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಡಿ.25ರಂದು ಬೆಳಿಗ್ಗೆ ತಂತ್ರಿಗಳ ಸ್ವಾಗತ, ದೇವತಾ ಪ್ರಾರ್ಥನೆ, ಗಣಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಬೆಳಾಲು ಪೇಟೆಯಿಂದ ಮೆರವಣಿಗೆಯೊಂದಿಗೆ ಹಸಿರುವಾಣಿ ಸಮರ್ಪಣೆ, ಬಳಿಕ ಅನಂತಪದ್ಮನಾಭ ಮಹಿಳಾ ಕುಣಿತಾ ಭಜನಾ ತಂಡ ಮತ್ತು ಶ್ರೀ ಅನಂತೇಶ್ವರ ಭಜನಾ ಮಂಡಳಿಯಿಂದ ಭಜನೆ, ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಶ್ರೀ ನಾಗ ದೇವರಿಗೆ – ಕಲಶಾಭಿಷೇಕ, ತನು ಸಮರ್ಪಣೆ, ಪರಿವಾರ ದೈವಗಳಿಗೆ ಕಲಶಾಭಿಷೇಕ, ಪರ್ವ ತಂಬಿಲ, ಮಧ್ಯಾಹ್ನ ಮಹಾ ಪೂಜೆ, ಅನ್ನಸಂತರ್ಪಣೆ, ಊರವರಿಂದ ಶ್ರೀ ಮಹಾ ವಿಷ್ಣುಯಾಗ, ವಿಷ್ಣು ಸಹಸ್ರ ನಾಮ ಪಾರಾಯಣ ರಾತ್ರಿ ಪೂಜೆ ಹಾಗೂ ಶ್ರೀ ದೇವರಿಗೆ ರಂಗ ಪೂಜೆ, ದೇವರ ಬಲಿ ಹೊರಟು ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ವಿಜಯ ಕುಮಾರ್ ಕೊಡಿಯಾಲ್‌ ಬೈಲ್ ನಿರ್ದೇಶನದಲ್ಲಿ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.26 ಬೆಳಿಗ್ಗೆ ಗಣಪತಿ ಹೋಮ, ಬಳಿಕ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಸಿರಿ ಮುಡಿ ಗಂಧ ಪ್ರಸಾದ ವಿತರಣೆ ಮಧ್ಯಾಹ್ನ ಮಹಾ ಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ದುರ್ಗಾಪೂಜೆ, ರಾತ್ರಿ ಪೂಜೆ, ಪ್ರಸನ್ನ ರಂಗ ಪೂಜೆ ಬಳಿಕ ಧಾರ್ಮಿಕ ಸಭೆ, ನಂತರ ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ, ಭೈರವ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಸಿರಿಸಿಂಗಾರ ನರ್ತನ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಜೈನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಅಸ್ರಣ್ಣ ಗಿರೀಶ್ ಬಾರಿತ್ತಾಯ, ಜಾತ್ರಾ ಸಮಿತಿಯ ಪ್ರಧಾನ ಸಂಚಾಲಕ ದೇಜಪ್ಪ ಗೌಡ ಅರಣೆಮಾರು ತಿಳಿಸಿದ್ದಾರೆ.

Related posts

ಕೊಯ್ಯೂರು ಶಾಲೆಗೆ ನೆರಿಯ ಪೆಟ್ರೋ ನೆಟ್ ಸಂಸ್ಥೆಯಿಂದ ಡಿಜಿಟಲ್ ಪ್ರೊಜೆಕ್ಟರ್ ಹಸ್ತಾಂತರ

Suddi Udaya

ರೆಖ್ಯ : ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya

ಉರುವಾಲು :32 ನೇ‌ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟಿ ರಕ್ಷಿತಾ ಪ್ರೇಮ್ ದಂಪತಿ ಭೇಟಿ

Suddi Udaya

ಯುವ ಉದ್ಯಮಿ ಕಿರಣ್ ಕುಮಾರ್ ಮಂಜಿಲರವರಿಂದ ಮಾನವೀಯ ಕಾರ್ಯ: ಆರಂಬೋಡಿ ಗ್ರಾಮದ ಬಡ ಕುಟುಂಬಕ್ಕೆ ಸುಮಾರು ರೂ 70 ಸಾವಿರದಲ್ಲಿ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್‌ ರವರನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ನೇಮಕ

Suddi Udaya
error: Content is protected !!