25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಿನಿ ವಿಮಾನ ನಿಲ್ದಾಣ: ಧರ್ಮಸ್ಥಳ ನೀರಚಿಲುಮೆ ಬಳಿ ಜಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನೀರಚಿಲುಮೆ ಬಳಿ ಪ್ರಸ್ತಾವಿತ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಜಾಗವನ್ನು ಡಿ.21 ರಂದು ಬೆಳಗ್ಗೆ ದ.ಕ ಜಿಲ್ಲಾ ಪದನಿಮಿತ್ತ ಭೂದಾಖಲೆಗಳ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಪರಿಸರದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳು ಏಕ ಕಾಲದಲ್ಲಿ ಲ್ಯಾಂಡಿಂಗ್ ಆಗಲು ಅವಕಾಶವಿರುವ ಲಘು ವಿಮಾನ ನಿಲ್ದಾಣ ನಿರ್ಮಿಸಲಾಗುವುದು, ರಾಜ್ಯಸಭಾ ಸದಸ್ಯರಾಗಿರುವ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಶಾಸಕ ಹರೀಶ್ ಪೂಂಜಾ ಅವರ ಕೋರಿಕೆಯಂತೆ ಪ್ರಸ್ತಾವಿತ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಪ್ರಥಮ ಹಂತದಲ್ಲಿ ಉಡಾನ್ ಯೋಜನೆಯಡಿ 100 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ ಎಂದು ಈ ಹಿಂದಿನ ಬಿಜೆಪಿ ಸರಕಾರದಲ್ಲಿ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರು ಬೆಳ್ತಂಗಡಿ ಕಿನ್ಯಮ್ಮ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹಿಂದೆ ಘೋಷಣೆ ಮಾಡಿದ್ದರು.


ಅವರು ಘೋಷಣೆ ಮಾಡಿದ ಒಂದು ವಾರದ ನಂತರ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ತಾಂತ್ರಿಕ ವಿಭಾಗದ ಅಧಿಕಾರಿಗಳು ಡಿ.ಪಿ.ಆರ್ ಮಾಡಲು ಬೆಳ್ತಂಗಡಿಗೆ ಆಗಮಿಸಿ, ಬೆಳ್ತಂಗಡಿಯ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಲಾಯಿಲ ಹಾಗೂ ಮೇಲಂತಬೆಟ್ಟು ಗಡಿ ಭಾಗದಲ್ಲಿ ಮತ್ತು ಧರ್ಮಸ್ಥಳ ಗ್ರಾಮದ ನೀರಚಿಲುಮೆ ಬಳಿ ಸ್ಥಳ ವೀಕ್ಷಣೆಯನ್ನು ಮಾಡಿದ್ದರು.
ವಿಮಾನ ನಿಲ್ದಾಣಕ್ಕೆ 100 ಎಕರೆಯಷ್ಟು ಜಾಗ ಬೇಕಾಗಿದ್ದು, ಲಾಯಿಲ ಗ್ರಾಮ ಮತ್ತು ಮೇಲಂತಬೆಟ್ಟು ಗ್ರಾಮಕ್ಕೆ ಸೇರಿರುವ ಸರ್ವೆ ನಂಬರ್ 158 ರಲ್ಲಿರುವ 608 ಎಕರೆ ಸರಕಾರಿ ಜಾಗದಲ್ಲಿ 100 ಎಕ್ರೆ ಜಾಗ ಹಾಗೂ ಧರ್ಮಸ್ಥಳ ಗ್ರಾಮ ಮತ್ತು ಕಲ್ಮಂಜ ಗ್ರಾಮಕ್ಕೆ ಸೇರಿದ ನೀರಚಿಲುಮೆಯ ಬಳಿ ಸರ್ವೆ ನಂಬರ್ 57 ರಲ್ಲಿರುವ 45 ಎಕರೆ ಸರಕಾರಿ ಜಾಗವನ್ನು ಗುರುತಿಸಿ ಡಿಪಿಆರ್ ಮಾಡಿ ತೆರಳಿದ್ದರು. ಇದಾಗಿ ಒಂದು ವರ್ಷ ಕಳೆದಿದೆ. ಇದೀಗ ದ.ಕ ಜಿಲ್ಲಾ ಪದನಿಮಿತ್ತ ಭೂದಾಖಲೆಗಳ ಅಧಿಕಾರಿಗಳ ತಂಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೀರಚಿಲುಮೆ ಬಳಿ ಇಂದು ಬೆಳಿಗ್ಗೆ ಆಗಮಿಸಿ ಸ್ಥಳ ಪರಿಶೀಲನೆ ಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.

Related posts

ಬಳಂಜ: ಅಟ್ಲಾಜೆ ದ.ಕ ಜಿ.ಪಂ. ಕಿ.ಪ್ರಾ ಶಾಲಾ ಪ್ರಾರಂಭೋತ್ಸವ ಸಂಭ್ರಮ: ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರುರವರಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ದ.ಕ ಜಿಲ್ಲಾ ಕಸಾಪ ವತಿಯಿಂದ ನಾಲ್ವರು ಹಿರಿಯ ಸಾಹಿತಿಗಳ ಭೇಟಿ, ಯೋಗಕ್ಷೇಮ ವಿಚಾರಣೆ

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ನೂತನ ವಾಸ್ತವ್ಯದ ಮನೆ, ಸಭಾಭವನ ಉದ್ಘಾಟನೆ

Suddi Udaya

ಗೇರುಕಟ್ಟೆ: ಸ್ನೇಹ ಸಂಗಮ ಆಟೋ-ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ವಿ.ಪ. ಮಾಜಿ ಶಾಸಕ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ.50 ಲಕ್ಷ ಅನುದಾನದಿಂದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ

Suddi Udaya

ಕೊಕ್ಕಡ: ಪಲಸ್ತಡ್ಕ ರಕ್ಷಿತಾರಣ್ಯದಿಂದ ಮರ ಕಳವು ಭೇದಿಸಿದ ಅರಣ್ಯ ಇಲಾಖೆ: ಬಂಧಿಸಲಾಗಿದ್ದ ಆರೋಪಿ ಪ್ರಕಾಶ್ ಜಾಮೀನು ಮೇಲೆ ಬಿಡುಗಡೆ

Suddi Udaya
error: Content is protected !!