24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಕರ ಸಮಾಲೋಚನ ಸಮಾರಂಭ

ನಡ: ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿಯ ವತಿಯಿಂದ ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಸಮಾಲೋಚನ ಸಭೆ ಜರಗಿತು.


ಸಭೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಮೋಹನ್ ರವರು ಉದ್ಘಾಟಿಸಿ ಮಾತನಾಡುತ್ತಾ, ಮಾಡಿ ಕಲಿ ಎಂಬ ತತ್ವದಡಿ ಮಕ್ಕಳ ಕಲಿಕೆಯನ್ನು ಸಾಧಿಸಬಹುದು. ಏನೇ ತಂತ್ರಜ್ಞಾನ ಬಂದರೂ ಕಲಿಕೆಗೆ, ಕಲಿಕಾ ವ್ಯವಸ್ಥೆಗೆ ಅದು ಪರ್ಯಾವಲ್ಲ. ಅಂತಿಮವಾಗಿ ಶಿಕ್ಷಕರೇ ಪ್ರಯೋಗಶೀಲ ಮತ್ತು ಪರಿಣಾಮಕಾರಿ ಪಾತ್ರ ನಿರ್ವಹಿಸುವವರು. ಆದ್ದರಿಂದ ಕಾರ್ಯಾಗಾರದಲ್ಲಿ ಚರ್ಚಿತ ವಿಷಯಗಳು ತರಗತಿಯ ಕೋಣೆಗೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗದ ರಾಮಕೃಷ್ಣ ಭಟ್ ಬೆಳಾಲು, ಮಹಮ್ಮದ್ ರಿಯಾಜ್ ಕೊಕ್ರಾಡಿ, ವಸಂತ ನಾಯ್ಕ ಪುತ್ತಿಲ, ಪೂರ್ಣಿಮಾ ಬೆಳ್ತಂಗಡಿ, ಚೈತ್ರ ಪಡಂಗಡಿ ಜಗನ್ನಾಥ ಗರುವಾಯನಕೆರೆ, ಶ್ರೀನಿವಾಸ ಎಂ ನೇಲ್ಯಡ್ಕ ಇವರು ಕಾರ್ಯಾಗಾರವನ್ನು ಸಡೆಸಿಕೊಟ್ಟರು.
ವಲಯ ಸಂಪನ್ಮೂಲ ಅಧಿಕಾರಿ ಶ್ರೀಮತಿ ಸುಜಾತಾರವರು ಶುಭಕೋರಿದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಿಯಾಜ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಭಟ್ ಬೆಳಾಲು ಇವರಿಗೆ ಮತ್ತು ನಡ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ, ಶಾಲೆಯಲ್ಲಿ ಸಮಾಜ ವಿಜ್ಞಾನ ಪ್ರಯೋಗಾಲಯ ತೆರೆದ ಸಾಧನೆಗಾಗಿ ಶಿವಪುತ್ರ ಸುನಗಾರರವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ಶಿವಪುತ್ರ ಸುನಗಾರ್ ಸ್ವಾಗತಿಸಿ, ಗೌರವ ಶಿಕ್ಷಕಿ ಮಿಸ್ತ್ರಿಯ ವಂದಿಸಿದರು, ಶಿಕ್ಷಕಿ ಶ್ರೀಮತಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.

Related posts

ಕನ್ಯಾಡಿ-2 : ನಾರ್ಯ ಎಂಬಲ್ಲಿ ಚಿರತೆ ಪತ್ತೆ

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಜು.19: ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ: ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ

Suddi Udaya

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya
error: Content is protected !!