September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ. 23-24: ಗುರುವಾಯನಕೆರೆ ಎಕ್ಸೆಲ್ ಪಿ ಯು ಕಾಲೇಜಿನಲ್ಲಿ “ಎಕ್ಸೆಲ್ ಪರ್ಬ”

ಗುರುವಾಯನಕೆರೆ: ಇಲ್ಲಿಯ ಎಕ್ಸೆಲ್ ಪಿ ಯು ಕಾಲೇಜಿನಲ್ಲಿ “ಎಕ್ಸೆಲ್ ಪರ್ಬ” ಡಿ. 23ರಿಂದ 24 ರವರೆಗೆ ವಿದ್ಯಾಸಾಗರ ಕ್ಯಾಂಪಸ್ ಗುರುವಾಯನಕೆರೆಯಲ್ಲಿ ನಡೆಯಲಿದೆ.

ಡಿ.23 ರಂದು ಬಂಗಾಡಿ ಅರಮನೆಯ ಬಿ ಯಶೋಧರ ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ, ಪುಂಜಾಲಕಟ್ಟೆ ಪಿ ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರು ರಾಜವೀರ ಇಂದ್ರ, ಬೆಳ್ತಂಗಡಿಯ ವಿಕಾರ್ ಜನರಲ್ ಡಯಾಸಿಸ್ ಮತ್ತು ಅಧ್ಯಕ್ಷ REV. FR ಜೋಸೆಫ್ ವಲಿಯಪರಂಬಿಲ್, ಬಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದೈವ ನರ್ತಕ ಮತ್ತು ಧರ್ಮದರ್ಶಿ ದೇಜಪ್ಪ ಬಾಚಕೆರೆ, ಜುಮ್ಮಾ ಮಸೀದಿ ಜಾರಿಗೆಬೈಲ್ ಇಮಾಮ್ ಜಾನಬಿ ಮುಹಮ್ಮದ್ ಯಾಸಿರ್ ಫಾಜಿಲ್ ಫುರ್ಕಾನಿ ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಡಿ.24 ರಂದು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಜಯರಾಜ್ ಅಮೀನ್, ಅಂಕೋಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮನೋಹರ ಎಂ , ಬೆಳ್ತಂಗಡಿ ಉದ್ಯಮಿ ಶಮಂತ್ ಕುಮಾರ್ ಜೈನ್ ಬಿ., ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲ ನವೀನ್ ಕುಮಾರ್ ಮರೀಕೆ ತಿಳಿಸಿದ್ದಾರೆ.

Related posts

ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

Suddi Udaya

ಶಿರ್ಲಾಲು ಶಾಲಾ ಹಳೆವಿದ್ಯಾರ್ಥಿ ಸಂಘದಿಂದ ಆರ್ಥಿಕ ನೆರವು

Suddi Udaya

ಬೆಳಾಲು ತಾರಗಂಡಿ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ಜ.24: ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಬಂದಾರು: 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100 ಫಲಿತಾಂಶ

Suddi Udaya
error: Content is protected !!