ಬೆಳ್ತಂಗಡಿ: ಕಳೆದ 10 ವರ್ಷಗಳಿಂದ ಪವರ್ ಆನ್ ಸಂಸ್ಥೆಯು ಉದ್ಯಮದೊಂದಿಗೆ ಸಾಕಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದೆ.
ಪೌರ ಕಾರ್ಮಿಕರು ಬರೀ ಸ್ವಚ್ಚತೆಗೆ ಮಾತ್ರ ಸೀಮಿತವಾಗದೆ ಅವರು ನಮ್ಮಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಸದುದ್ದೇಶದಿಂದ ಸಂಸ್ಥೆಯ ಮಾಲಕ ಶೀತಲ್ ಜೈನ್ ಅವರು ಪವರ್ ಆನ್ ಸಂಸ್ಥೆಯ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಇತರರಿಗೆ ಮಾದರಿಯಾದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಾದ ಸುರೇಶ್, ಚಂದ್ರ ಬೋವಿ, ವಸಂತ, ಅಶೋಕ ಇವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಕೋರಿದರು.
ಸಂಸ್ಥೆಯ ಮಾಲಕ ಶೀತಲ್ ಜೈನ್ ಪೌರ ಕಾರ್ಮಿಕರಿಗೆ ಉಡುಗೊರೆ ನೀಡಿ ಗೌರವಿಸಿ, ಸ್ವಾಗತಿಸಿದರು. ಸಂಸ್ಥೆಯ ಪ್ರಮುಖರಾದ ಆಯಾನ್ಸ್ ಮೊಬೈಲ್ ಅರಿಹಂತ್ ಜೈನ್, ಸುಧೀರ್ ಜೈನ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೌರಕಾರ್ಮಿಕರು ನಗರದ ಜೀವನಾಡಿಗಳು:
ಪೌರಕಾರ್ಮಿಕರು ಸಮಾಜದ ಆರೋಗ್ಯ ಕಾಪಾಡುವ ವೈದ್ಯರಿದ್ದಂತೆ. ನಗರದ ಆರೋಗ್ಯ ಹಾಗೂ ಸ್ವಚ್ಛತೆ ಪೌರ ಕಾರ್ಮಿಕರ ಕೆಲಸದ ಮೇಲೆ ನಿಂತಿದೆ. ಹೀಗಾಗಿ ಪೌರಕಾರ್ಮಿಕರು ನಗರದ ಜೀವನಾಡಿಗಳು ಎಂದು ಪವರ್ ಆನ್ ಸಂಸ್ಥೆಯ ಮಾಲಕರಾದ ಶೀತಲ್ ಜೈನ್ ಹೇಳಿದರು.