32.2 C
ಪುತ್ತೂರು, ಬೆಳ್ತಂಗಡಿ
April 3, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಇವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಓವರಂ ಮ್ಯಾಚ್ ‘ರಾಜೇಶ್ವರಿ ರತ್ನ ಟ್ರೋಫಿ’ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ :ರಾಜಕೇಸರಿ ಸಂಘಟನೆ ಸಮಾಜದ ಸಾವಿರಾರು ಜನರಿಗೆ ಜಾತಿ ಭೇದವಿಲ್ಲದೆ ಸಹಕಾರ ನೀಡುತ್ತಿದೆ. ಆರೋಗ್ಯ ನೆರವಿಗಾಗಿ ವಿವಿಧ ಇಲಾಖೆಗಳನ್ನು ಒಟ್ಟುಗೂಡಿಸಿ ನಡೆಯುತ್ತಿರುವ ಈ ಕ್ರೀಡಾಕೂಟ ಶ್ಲಾಘನೀಯವಾದುದು. ಆಟಗಾರರು ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು’ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹೇಳಿದರು.

ಅವರು ಭಾನುವಾರ ಅಖಿಲ ಕರ್ನಾಟಕ ರಾಜಕೇಶರಿ ಟ್ರಸ್ಟ್ ಬೆಳ್ತಂಗಡಿ ತಾಲ್ಲೂಕು ಇದರ ಆಶ್ರಯದಲ್ಲಿ ರಾಜಕೇಶರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಇವರ ನೇತೃತ್ವದಲ್ಲಿ ಒಂದು ಬಡ ಕುಟುಂಬದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗಾಗಿ 543 ನೇ ಸೇವಾ ಯೋಜನೆಯ ಪ್ರಯುಕ್ತ ಬೆಳ್ತಂಗಡಿ ತಾಲ್ಲೂಕಿನ ವಿವಿಧ ಇಲಾಖೆಯ ಓವರಂ ಮ್ಯಾಚ್ ‘ರಾಜೇಶ್ವರಿ ರತ್ನ ಟ್ರೋಫಿ’ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದರು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಉದ್ಘಾಟಿಸಿ ಶುಭ ಹಾರೈಸಿದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಮಾತನಾಡಿ, ‘ ಮುದುಡಿ ಕುಳಿತ ದೇಹಕ್ಕೆ ವ್ಯಾಯಾಮ ಸಿಗುವ ಹಾಗೆ ಸಂಘಟನೆಯವರು ಮಾಡಿದ್ದಾರೆ. ನಮ್ಮ ಸಂಪಾದನೆಯ ಒಂದು ಭಾಗ ಸಮಾಜಕ್ಕೆ ನೀಡಿ ಸುಸ್ಥಿರ ಸಮಾಜ ನಿರ್ಮಿಸುವಲ್ಲಿ ರಾಜ ಕೇಸರಿ ಸಂಘಟನೆ ಮಾಡುತ್ತಿರುವ ಕಾರ್ಯ ದೇವರು ಮೆಚ್ಚುವ ಕಾರ್ಯವಾಗಿದೆ ಎಂದರು.

ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ವಿಭಾಗದ ವ್ಯವಸ್ಥಾಪಕ ಉದಯ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಬೆಳ್ತಂಗಡಿ ಗೃಹ ರಕ್ಷಕ ದಳದ ಅಧ್ಯಕ್ಷ ಜಯಾನಂದ್, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ, ಅಗ್ನಿ ಶಾಮಕ ದಳದ ಉಸ್ಮಾನ್, ಪಟ್ಟಣ ಪಂಚಾಯತ್ ನ ಕರುಣಾಕರ್ ಇದ್ದರು.

ರಾಜಕೇಸರಿ ಸಂಘಟನೆಯ ಅಧ್ಯಕ್ಷ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು.ಸಂಘಟನೆಯ ವಿಜಯ್ ಸಿಕ್ವೇರಾ ನಿರೂಪಿಸಿ ವಂದಿಸಿದರು.

Related posts

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಪ್ರಯುಕ್ತ ಭಜನ್ ಸಂಧ್ಯಾ ಕಾರ್ಯಕ್ರಮ

Suddi Udaya

ಕೊಕ್ಕಡ ಗ್ರಾ.ಪಂ. ನಿಂದ ಬ್ಯಾಂಕ್ ಹ್ಯಾಕರ್ ಗಳು ಹ್ಯಾಕ್ ಮಾಡಿ ಹಣ ಎಗರಿಸುವುದನ್ನು ತಡೆಯುವ ಸಲುವಾಗಿ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ತುರ್ತು ಸಭೆ

Suddi Udaya

ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರಮದಾನ

Suddi Udaya

ಬೆಳ್ತಂಗಡಿ: ಕ್ಯಾನ್ಸರ್ ಲಿಂಫೋಮಾ ಖಾಯಿಲೆ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ:ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: ರೂ. 123 ಕೋಟಿ ವ್ಯವಹಾರ, ರೂ. 50 ಲಕ್ಷ ಲಾಭ, ಶೇ.12 ಡಿವಿಡೆಂಡ್

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!