April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಬೆಳ್ತಂಗಡಿ

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ-ದೇವರ ಆಭರಣಗಳ ವೈಭವಯುತ ಮೆರವಣಿಗೆ ಶಾಸಕ ಹರೀಶ್ ಪೂಂಜರವರಿಂದ ಹಾಗೂ ಮುಂಬೈ ಉದ್ಯಮಿ ಸುರೇಶ್ ಪೂಜಾರಿಯವರಿಂದ ಚಾಲನೆ

ಶಿರ್ಲಾಲು: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.

ಅಳದಂಗಡಿಯಲ್ಲಿ ದೈವ ದೇವರುಗಳ ಆಭರಣಗಳ ರಥಕ್ಕೆ ಹಾಗೂ ಕುಣಿತಾ ಭಜನೆಗೆ ಶಿರ್ಲಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗುಣಮ್ಮ ಅವರು ಚಾಲನೆ ನೀಡಿದರು‌.

ಸಂಜೆ ಕುಣಿತ ಭಜನೆ, ಕೀಳು ಕುದುರೆ, ಚೆಂಡೆ ವಾದ್ಯ, ವಿವಿಧ ವೇಷ ಭೂಷಣಗಳೊಂದಿಗೆ ವೈಭವಯುತ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ-ದೇವರ ಆಭರಣಗಳ ವೈಭವಯುತ ಮೆರವಣಿಗೆ ನಡೆಯಿತು.

ಶಿರ್ಲಾಲು ಬ್ರಹ್ಮ ಬೈದರ್ಕಳ ಗರಡಿ ಹತ್ತಿರ ನಡೆದ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ ದೇವರ ಆಭರಣಗಳ ಮೆರವಣಿಗೆಗಳ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿ ಶುಭ ಕೋರಿದರು.ಮುಂಬೈ ಉದ್ಯಮಿ, ದಾನಿ ಸುರೇಶ್ ಪೂಜಾರಿ ಊರ ಕಲಶಕ್ಕೆ ಭತ್ತ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿರಾಜ್ ಗೌಡ,ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಒಡಿಮಾರು, ಹೊರೆಕಾಣಿಕೆ ಸಮಿತಿ ಸಂಚಾಲಕ ಪ್ರಕಾಶ್ ಕಟ್ರಬೈಲು,ಹರೀಸದ್ ಕಲಗಲಾಜೆ,ವಿಜಯ್ ಉಪಸ್ಥಿತರಿದ್ದರು.

ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರವರು, ಭಕ್ತರು ಸಹಕರಿಸಿದರು.ಸತೀಶ್ ನೆಲ್ಲಿಗುಡ್ಡೆ ಸ್ವಾಗತಿಸಿದರು, ದೀಕ್ಷಿತ್ ಅಂಡಿಂಜೆ ನಿರೂಪಿಸಿದರು.

ಗಮನ ಸೆಳೆದ ಕುಣಿತಾ ಭಜನೆ: ಅಳದಂಗಡಿಯಿಂದ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ 1500 ಕ್ಕೂ ಹೆಚ್ಚು ಭಜಕರಿಂದ ಕುಣಿತಾ ಭಜನೆ ನಡೆಯಿತು.

Related posts

ವೇಣೂರು ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ

Suddi Udaya

ವಾಣಿಜ್ಯ ವಿಭಾಗದ ಅಂತರ್ ಕಾಲೇಜು ಸ್ಪರ್ಧೆ: ನಡ ಪದವಿ ಪೂರ್ವ ಕಾಲೇಜಿಗೆ ಬಹುಮಾನ

Suddi Udaya

 ಡಾ| ಡಿ. ಹೆಗ್ಗಡೆಯವರಿಗೆ “ಯಕ್ಷದ್ರುವ ಪಟ್ಲ ಸಂಭ್ರಮ -2023” ಆಮಂತ್ರಣ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಅಗ್ನಿವೀರ್‌ ತರಬೇತಿ ಪೂರೈಸಿ ಇಂದು ಊರಿಗೆ ಆಗಮಿಸಲಿರುವ ರೆಖ್ಯದ ರಂಜಿತ್

Suddi Udaya

ನಾರಾವಿ: ಸೂರ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ನಾರಾಯಣ ಪೂಜಾರಿ, ಪ್ರದಾನ ಕಾರ್ಯದರ್ಶಿ ಯಾಗಿ ಡಾ| ವಿನೋದ. ಪಿ. ಶೆಟ್ಟಿ ಆಯ್ಕೆ

Suddi Udaya
error: Content is protected !!