23.6 C
ಪುತ್ತೂರು, ಬೆಳ್ತಂಗಡಿ
May 19, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಹಣ ದ್ವಿಗುಣ ಮಾಡುವುದಾಗಿ ಮೋಸ ಮಾಡಿದ ಪ್ರಕರಣ: ನೊಂದ ಮಹಿಳೆ ವೀಟಾ ಮರೀನಾ ಡಿಸೋಜ ನದಿಗೆ ಹಾರಿ ಆತ್ಮಹತ್ಯೆ


ಬೆಳ್ತಂಗಡಿ : ಹಣ ದ್ವಿಗುಣ ಮಾಡುವುದಾಗಿ ಮೋಸ ಮಾಡಿದ ಪ್ರಕರಣಂದಿಂದ ನೊಂದ ಮಹಿಳೆ ಡಿ. 24 ರಂದು
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀಟಾ ಮರೀನಾ ಡಿಸೋಜಾ(32) ಮೃತ ಮಹಿಳೆ
ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ವೀಟಾ ನಿನ್ನೆ ಸಂಜೆ ಮನೆಗೆ ಹೋಗಿ ನಂತರ ಗಂಡ ಚರ್ಚ್ ಗೆ ಹೋದ ಬಳಿಕ ಸ್ಕೂಟರ್ ನಲ್ಲಿ ನೇರ ಸಿದ್ದಕಟ್ಟೆ ಮುಚ್ಚಮೋಗ್ರು ಬ್ರಿಜ್ ಬಳಿ ಹೋಗಿ ಅಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ? :
ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಈರೋಡಿ ಎಂಬಲ್ಲಿಯ ಜೋನ್ ಸಂತೋಷ್ ಡಿಸೋಜಾ ಎಂಬವರ ಪತ್ನಿಯಾದ ವೀಟಾ ಮರೀನಾ ಡಿಸೋಜಾ ಎಂಬವರು ಡಿ.8 ರಂದು ಬೆಳಿಗ್ಗೆ 11:40 ಸುಮಾರಿಗೆ ವೀಟಾ ಮರೀನಾ ಡಿಸೋಜಾ ಎಂಬವರ ವಾಟ್ಸ್ಅಪ್ ಗೆ ಮೊಬೈಲ್ ಸಂಖ್ಯೆ 9044759336 ನಿಂದ ಯಾರೋ ಅಪರಿಚಿತ ವ್ಯಕ್ತಿ ನಿಮ್ಮ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ತಿಳಿಸಿ ಅದಕ್ಕಾಗಿ ಟಲಿಗ್ರಾಂ ಆಪ್ ಡೌನ್‌ಲೋಡ್ ಮಾಡುವಂತೆ ತಿಳಿಸಿ ಲಿಂಕ್ ಇರುವ ಮೆಸೇಜ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ವೀಟಾ ಮರೀನಾ ಡಿಸೋಜಾ ಟೆಲಿಗ್ರಾಂ ಆಪ್ ಡೌನ್‌ಲೋಡ್ ಮಾಡಿ ಅವರು ಕೊಟ್ಟಂತಹ ಲಿಂಕ್ ಮುಖೇನ ಅವರೊಂದಿಗೆ ವ್ಯವಹರಿಸಿದಾಗ ಡಿ.8 ರಿಂದ ಡಿ.11 ರವರೆಗೆ ವೀಟಾ ಮರೀನಾ ಡಿಸೋಜಾ ಕರ್ನಾಟಕ ಬ್ಯಾಂಕ್‌ ಖಾತೆ ರವರೆಗೆ ವೀಟಾ ಮರೀನಾ ಡಿಸೋಜಾ ಕರ್ನಾಟಕ ಬ್ಯಾಂಕ್‌ ಖಾತೆ 4742500101612801 ರೂ. 2 ,10,403/- ರೂಪಾಯಿ ಹಣವನ್ನು ಹಾಕಿದ್ದು, ಇದರಿಂದ ವೀಟಾ ಮರೀನಾ ಡಿಸೋಜಾಗೆ ಅಪರಿಚಿತ ವ್ಯಕ್ತಿಯ ಮೇಲೆ ನಂಬಿಕೆ ಬಂದು ಅವರು ಹೇಳಿದಂತೆ ಹಣ ದ್ವಿಗುಣ ಮಾಡುವ ಬಗ್ಗೆ ಡಿ.12 & UPI transaction ID 334651862892 ಕ್ಕೆ50,000/-, . 13 UPI transaction ID 334711784526ಕ್ಕೆ ರೂ.30,000/-, UPI transaction ID 371321985478 ರೂ. 27,100/- ಹಣ ಹಾಕಿದ್ದು ಬಳಿಕ ವೀಟಾ ಮರೀನಾ ಡಿಸೋಜಾ ತಾನು ಹಾಕಿದ ಹಣವನ್ನು ದ್ವಿಗುಣ ಮಾಡಿಕೊಡುವಂತೆ ಕೇಳಿಕೊಂಡಾಗ ಅಪರಿಚಿತ ಆರೋಪಿಗಳು ಇನ್ನೂ ಇದೇ ರೀತಿ ಮೂರು ಟಾಸ್ಕ್ ನಿಂದ ಹಣ ಬರಲು ಬಾಕಿ ಇದೆ ಅದರ ನಂತರ ನಿಮಗೆ ಹಣ ಹಾಕುವುದಾಗಿ ತಿಳಿಸಿರುತ್ತಾರೆ. ನಂತರ ಡಿ.14 ರಂದು ಕೂಡಾ ವೀಟಾ ಮರೀನಾ ಡಿಸೋಜಾ ಹಣದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ನೀವು ಹಾಕಿದ ಹಣದ ಮೊತ್ತ ಕಡಿಮೆ ಇದ್ದು, ಹೆಚ್ಚಿನ ಮೊತ್ತದ ಹಣ ಹಾಕುವಂತೆ ತಿಳಿಸಿದಾಗ ವೀಟಾ ಮರೀನಾ ಡಿಸೋಜಾ ನಂಬಿಸಿದ್ದು ನಂತರ ತನ್ನ ಗಂಡನ, ಅಕ್ಕನ ಮತ್ತು ಗೆಳತಿಯ ಒಡವೆಗಳನ್ನು ಅವರಿಗೆ ವಿಚಾರ ತಿಳಿಸದೆ ಅಡವಿಟ್ಟು ಡಿ.15 ರಂದು ವಾಮದಪದವು ಬ್ಯಾಂಕಿನಿಂದ SAHANI PROPERTY DEALER ಎಂಬ ಹೆಸರಿನ ಅಕೌಂಟು ಸಂಖ್ಯೆಯಾದ 333905001619 ರೂ. 5,72,000 ಹಣ ಹಾಗೂ ಡಿ.19 ರಂದು ವಾಮದಪದವು ಬ್ಯಾಂಕಿನಿಂದ ATIK HAJIBHAI AGWAN ಎಂಬ ಹೆಸರಿನ 2211214242897691 ರೂ. 4,00,000/- ಹಣ ಹಾಗೂ ಡಿ.20ರಂದು ವಾಮದಪದವು ಬ್ಯಾಂಕಿನಿಂದ COUNTRY CARGO PACKERS AND MOV O & ರೂ.2.00,000 ಹಾಗೂ ಡಿ.22 ರಂದು PANDA ASHOK KUMA 0 438001502322 ರೂ. 4,50,000 ರೂಪಾಯಿ ಹಣ ಹಾಕಿದರೂ ಹಣ ದ್ವಿಗುಣ ಮಾಡಿಕೊಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲದನ್ನು ಗಮನಿಸಿ ಮೋಸ ಹೋದ ವಿಚಾರವನ್ನು ತನ್ನ ಗಂಡನಿಗೆ ತಿಳಿಸಿ ಬಳಿಕ ಡಿ.23 ರಂದು ಪುಂಜಾಲಕಟ್ಟೆ ಠಾಣೆಗೆ ಮೋಸ ಹೋದ ವೀಟಾ ಮರೀನಾ ಡಿಸೋಜಾ ಖಾತೆಯಿಂದ ವಿವಿಧ ಹಣಗಳಲ್ಲಿ ಒಟ್ಟು 20,29,100 ಲಕ್ಷ ರೂಪಾಯಿ ವಂಚನೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಠಾಣೆಯಲ್ಲಿ 66(C), 66(D), 417,420 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಇದೀಗ ಮೋಸ ಹೋದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

Related posts

ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಡಿರುದ್ಯಾವರ ಹರ್ಷಿತ್ ನೇಮಕ

Suddi Udaya

ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ

Suddi Udaya

ಮದ್ದಡ್ಕ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜೆಸಿಐ ಕೊಕ್ಕಡ ಕಪಿಲ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಕೊಕ್ಕಡ ಗ್ರಾ.ಪಂ. ಸ್ವಚ್ಛತಾ ಸಂಕೀರ್ಣಕ್ಕೆ ಭೇಟಿ

Suddi Udaya

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಪ್ರಥಮ

Suddi Udaya

ನಡ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!