24.4 C
ಪುತ್ತೂರು, ಬೆಳ್ತಂಗಡಿ
May 19, 2025
ಅಪರಾಧ ಸುದ್ದಿ

ತೋಟದಲ್ಲಿ ಅಡಿಕೆ ಸಂಗ್ರಹಣೆ ಮಾಡುತ್ತಿರುವಾಗ ಹಲ್ಲೆ ಮಾಡಿ ಅಡಿಕೆ- ಕಾಂಕ್ರೀಟ್ ಬೇಲಿ ದರೋಡೆ ಆರೋಪ: ಇಪ್ಪತ್ತು ಮಂದಿಯ ಮೇಲೆ ಪ್ರಕರಣ ದಾಖಲು

ಶಿಬಾಜೆ: ಅಡಿಕೆ ತೋಟದಲ್ಲಿ ಅಡಿಕೆ ಸಂಗ್ರಹಣೆ ಮಾಡುತ್ತಿರುವ ಸಮಯ ತಂಡವೊಂದು ತನ್ನ ಸೊಸೆಗೆ ಹಲ್ಲೆ ಮಾಡಿ ಅಡಿಕೆ ಸಹಿತ ಕಾಂಕ್ರೀಟ್ ಬೇಲಿಯ ಕಂಬಗಳನ್ನು ಬೇಲಿಯನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ಆರೋಪಿಸಿ, ಶಿಬಾಜೆ ಗ್ರಾಮದ ಎ.ಸಿ ಎಲಿಯಮ್ಮ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಡಿ.23ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಎ ಸಿ ಎಲಿಯಮ್ಮ ಕೋಂ ಟಿ ಕೆ ಮಾಥ್ಯು ನೀಡಿದ ದೂರಿನಲ್ಲಿ ಡಿ. 23 ರಂದು ಬೆಳಿಗ್ಗೆ ತನ್ನ ಸೊಸೆ ಅಡಿಕೆ ಫಸಲು ಸಂಗ್ರಹಣೆಗಾಗಿ ತೋಟಕ್ಕೆ ಹೋಗಿ ಫಸಲುಗಳನ್ನು ಗೋಣಿ ಚೀಲದಲ್ಲಿ ತುಂಬಿಸುತ್ತಿದ್ದಾಗ, ಟಿ.ಆರ್ ಮೋಹನ, ತಂಗಮಣಿ, ವಾಸು, ಲತಾ, ವಾಸು ರವರ ಮಗಳು, ವಿಶ್ವನಾಥ, ರವಿ, ರತೀಶಗೌಡ, ರಾಧಾಕೃಷ್ಣ, ಪುರಂದರ್ ರಾವ್, ಸುರೇಶ್ ಎನ್.ಕೆ., ಲತಿಕ, ರೇಖ, ಸುಧಾಕರ, ಆನಂದ ಗೌಡ ಬಿನ್ ಲಿಂಗಪ್ಪ ಗೌಡ, ಗಂಗಾಧರ, ಮಹೇಶ್ ಪೂಜಾರಿ, ರಾಜೇಶ್, ನವೀನ್ ನೆರಿಯ, ಪ್ರಭನ್ ಯಾನೆ ಪ್ರಭಾಕರ ಎಂಬವರುಗಳು ವಾಹನಗಳಲ್ಲಿ ಬಂದು, ಸೊಸೆಯನ್ನು ಸುತ್ತುವರಿದು, ಹಲ್ಲೆ ಮಾಡಿ, ಜಮೀನಿಗೆ ಹಾಕಿದ ಬೇಲಿಯನ್ನು ಪುಡಿ ಮಾಡಿ, ಸೊಸೆಯನ್ನು ಬೆದರಿಸಿ, ಸುಮಾರು ಹತ್ತರಷ್ಟು ಕಾಂಕ್ರೀಟ್ ಬೇಲಿಯ ಕಂಬಗಳನ್ನು ಅವರು ತಂದಿದ್ದ ಟೆಂಪೋದಲ್ಲಿ ಹಾಗೂ ಸುಮಾರು 20 ಕೆಜಿಯಷ್ಟು ಬೇಲಿಯನ್ನು ಕಾರಿನಲ್ಲಿ ಹಾಗೂ ಒಂದು ಗೋಣಿ ಅಡಿಕೆಯ ಫಸಲನ್ನು ರತೀಶ್ ಗೌಡರ ಕಾರಿನಲ್ಲಿ ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಎಂದು ಆರೋಪಿಸಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ ೧೧೩/೨೦೨೩ ಕಲಂ: ೧೪೩, ೧೪೭, ೩೪೧, ೩೨೩, ೪೨೭, ೩೯೫, ಜೊತೆಗೆ ೧೪೯ ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ಆರೋಪಿ ಲಾಯಿಲ ನಿವಾಸಿ ಸಾಜಿಲ್ ಗೆ ಶಿಕ್ಷೆ

Suddi Udaya

ಸವಣಾಲಿನಲ್ಲಿ ಬೈಕ್- ಬೈಕ್ ನಡುವೆ ಅಪಘಾತ : ಆಳದಂಗಡಿ ಹಾ.ಉ.ಸ.ಸಂಘದ ಮಾಜಿ ಕಾರ್ಯದರ್ಶಿ ಹೆನ್ರಿ ಡಿ’ ಸೋಜ ಮೃತ್ಯು

Suddi Udaya

ಕೆಎಸ್ ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು ಪ್ರಕರಣ: ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟ

Suddi Udaya

ಉಜಿರೆ ಕ್ರೀಡಾ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

Suddi Udaya

ಇಳಂತಿಲ: ಅಮಲು ಸೇವನೆಯಿಂದ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya

ತೋಟಾತ್ತಾಡಿ:ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

Suddi Udaya
error: Content is protected !!