37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಮಹಾಸಭೆಯು ಎಸ್. ಪಿ ಆಯಿಲ್ ಮಿಲ್ ನ ವಠಾರ ಉಜಿರೆಯಲ್ಲಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರು ಇವರ ಅಧ್ಯಕ್ಷತೆಯಲ್ಲಿ ಡಿ.24 ರಂದು ನಡೆಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ ವಾರ್ಷಿಕ ವರದಿಯನ್ನು ವಾಚಿಸಿದರು.ಸಂಘದ ಕೋಶಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ಲೆಕ್ಕಪತ್ರ ಮಂಡನೆ ಮಾಡಿದರು. ಸಂಘಕ್ಕೆ ಹೊಸದಾಗಿ ಆಯ್ಕೆಯಾದ ನೂತನ ಸಮಿತಿಯ ಸದಸ್ಯರನ್ನು ಹೂ ಕೊಟ್ಟು ಗೌರವಿಸಲಾಯಿತು. ಶ್ರೀ ಸುರೇಶ್ ಗೌಡ ಕೂಡಿಗೆ,

ಕಾಲಭೈರವೇಶ್ವರ ಒಕ್ಕಲಿಗ ಸಹಕಾರಿ ಸಂಘದ ಅಧ್ಯಕ್ಷರಾದ ರಂಜನ್ ಜಿ ಗೌಡ ಮಾತನಾಡಿ ಸಂಘದ ಅಭಿವೃದ್ಧಿಗೆ ಸಮಾಜ ಭಾಂದವರೆಲ್ಲರ ಸಹಕಾರ ಇದೆ.ಮುಂದೆಯೂ ಅಭಿವೃದ್ಧಿ ಕಾರ್ಯಗಳತ್ತ ಶ್ರಮ ವಹಿಸಬೇಕು ಈ ಮೂಲಕ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಂಘಟನೆಯನ್ನು ಇನ್ನಷ್ಟು ಪ್ರಬಲಗೊಳಿಸುವಲ್ಲಿ ಸಕ್ರಿಯರಾಗಬೇಕೆಂದು ಪ್ರೇರಣೆ ನೀಡಿದರು.

ಸಭಾಧ್ಯಕ್ಷತೆಯತೆಯನ್ನು ಬಾಲಕೃಷ್ಣ ಗೌಡ ಕೇರಿಮಾರು ವಹಿಸಿ ಮಾತನಾಡಿ ಸಂಘವು ನಡೆದು ಬಂದ ಪರಿಶ್ರಮ ಸಂಘಟನೆಯಲ್ಲಿ ಶ್ರಮ ಪಟ್ಟ ಗಣ್ಯರನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ನಮ್ಮ ಸಂಪಾದನೆಯಲ್ಲಿ ಕಿಂಚಿತ್ತು ಸಮಾಜಕ್ಕೆ ಸಮರ್ಪಸುವುದರಿಂದ ಅಭಿವೃದ್ಧಿಗೆ ಸಹಕರಿಯಾಗುತ್ತದೆ. ಮುಂದೆ ಸಾಧಿಸಬೇಕಾದುದು ಬಹಳಷ್ಟು ಇದೆ. ಮುಂದೆ ಸಹಕಾರದ ಅನುದಾನ ಪಡೆದು ಒಕ್ಕಲಿಗ ಸಮುದಾಯ ಭವನ ಕಟ್ಟಡದ ಶಿಲಾನ್ಯಾಸದ ಯೋಜನೆಯನ್ನು ತಿಳಿಸಿದರು.

ವಿಜಯ ಗೌಡ ಕಲ್ಲಲಿಕೆ, ಧರ್ಮರಾಜ ಗೌಡ ಅಡ್ಕಡಿ ಇವರು ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿದರು

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶಿವಕಾಂತ ಗೌಡ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶಿವಕಾಂತ ಗೌಡ ಒಕ್ಕಲಿಗ ಗೌಡ ಯುವ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಅನುಪಮಾ ಸತೀಶ್ ಗೌಡ ದಾಮೋದರ ಗೌಡ ಸುರುಳಿ ಹಾಗೂ ಶ್ರೀಮತಿ ಸೌಮ್ಯಲ ತ ಜಯಂತ ಗೌಡ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಾಲಕೃಷ್ಣ ಗೌಡ ಕಲ್ಲಾಜೆ ಇವರು ಉಪಸ್ಥಿತರಿದ್ದರು.

ಶ್ರೀಮತಿ ಮಮತಾ ಶಿವರಾಮ ಗೌಡ ಹಾಗೂ ಅನುಪಮಾ ಸತೀಶ್ ಗೌಡ ಇವರು ಪ್ರಾರ್ಥನೆ ಹಾಡಿದರು. ವಾರಿಜ ಸುಂದರ ಗೌಡ ಇಚ್ಚಿಲ ಸ್ವಾಗತಿಸಿದರು,ಭರತ್ ಗೌಡ ಹಾನಿಬೆಟ್ಟು ಧನ್ಯವಾದವಿತ್ತರು. ಪ್ರಮೋದ್ ಗೌಡ ಅಲೆಕ್ಕಿ ಮತ್ತು ನಿತಿನ್ ಗೌಡ ಸುರುಳಿ ಕಾರ್ಯಕ್ರಮ ನಿರೂಪಿಸಿದರು.

Related posts

ಜಿನಮಂದಿರಗಳ ಸ್ಥಳ ಹಾಗೂ ಅಭಿವೃದ್ಧಿಗೆ ಸಚಿವ ಡಿ. ಸುಧಾಕರ್ ರವರಿಗೆ ಮನವಿ

Suddi Udaya

ಜೀವನದ ಧನಾತ್ಮಕ ತಿರುವಿಗೆ ಎನ್ನೆಸ್ಸೆಸ್ ಪೂರಕ – ಡಾ. ಟಿ. ಕೃಷ್ಣಮೂರ್ತಿ

Suddi Udaya

ಶಿಬಾಜೆ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಬೆಳ್ತಂಗಡಿ ಜೈನ ಸಮಾಜದ ಸಂಘಟನೆಗಳಿಂದ ಖಂಡನೆ: ಸಮಗ್ರ ತನಿಖೆಗೆ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ

Suddi Udaya

ಮಿತ್ತಬಾಗಿಲು ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪ್ರತಿಭಟನೆ: ಸರಕಾರಕ್ಕೆ ಮನವಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!