ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.23 ರಂದು ಏಸು ಕ್ರಿಸ್ತನ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಸಂಚಾಲಕ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋರವರು ಕ್ರಿಸ್ಮಸ್ ಕೇಕನ್ನು ಕತ್ತರಿಸಿ ಹಬ್ಬದ ಮಹತ್ವ ಮತ್ತು ಸಂದೇಶವನ್ನು ನೀಡಿ ಆಶೀರ್ವದಿಸಿದರು.
ವಿದ್ಯಾರ್ಥಿಗಳು ಶಾಂತಿದೂತ ಏಸು ಕ್ರಿಸ್ತನ ಜನನದ ಹಿನ್ನೆಲೆ, ಜೀವನ ಸಂದೇಶವನ್ನು ಸಾರುವ ನೃತ್ಯ ರೂಪಕಗಳು, ಹಬ್ಬಕ್ಕೆ ಶುಭಾಶಯಗಳನ್ನು ಕೋರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಜೊತೆಗೆ ಹಬ್ಬದ ಮಹತ್ವವನ್ನು ಸಾರಿದರು.
ಕ್ರಿಸ್ಮಸ್ ಟ್ರೀ, ಗೋದಲಿ, ನಕ್ಷತ್ರಗಳು, ಉಡುಗೊರೆಗಳು ಮತ್ತು ಸಂತ ಕ್ಲೋಸ್ ಇವರ ಆಗಮನವು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿ, ಹಬ್ಬದ ವಿಶೇಷತೆಯಾಗಿ ಎಲ್ಲರನ್ನೂ ಆಕರ್ಷಿಸಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಫಾತಿಮತ್ ನುಶೈಫಾ ಸ್ವಾಗತಿಸಿ, ಫಾತಿಮತ್ ಝೈಫಾ ವಂದಿಸಿದರು. ಅರ್ವಿನ್ ಬೆನ್ನಿಸ್ ಹಾಗೂ ಜೇಸನ್ ಕೊರೆಯ ಕಾರ್ಯಕ್ರಮ ನಿರೂಪಿಸಿದರು . ಸಹಶಿಕ್ಷಕಿಯರಾದ ಲೋನ ಲೋಬೊ ಮತ್ತು ರೆನಿಟಾ ಲಸ್ರಾದೋ ಸಹಕರಿಸಿದರು.