ನಾವೂರು: ನಾವೂರು ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವವು ಡಿ.27 ರಂದು ಶ್ರೀ ಗುರುಕೃಪಾ ಭಜನಾ ಮಂದಿರದ ವಠಾರದಲ್ಲಿ ನಾವೂರು ಶ್ರೀ ಸೇಸಪ್ಪ ಗುರುಸ್ವಾಮಿ ಮತ್ತು ತೋಟತ್ತಾಡಿ ರವಿ ಗುರುಸ್ವಾಮಿಯವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದಕ್ಷಿಣ ಕನ್ನಡ ಇವರಿಂದ “ಹರಿವರಾಸನಂ ಗೀತೆಯ ಶತಾಬ್ಧಿ” ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಡಾ| ಪ್ರದೀಪ್ ಎ. ರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಪಂದಳ ರಾಜರಾಗಿರುವ ಶಶಿಕುಮಾರ ವರ್ಮ ಹಾಗೂ ಅವರ ಧರ್ಮಪತ್ನಿ ಶ್ರೀ ಕ್ಷೇತ್ರ ಶಬರಿಮಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದ.ಕ. ಜಿಲ್ಲೆಯ ಅಧ್ಯಕ್ಷ ಗಣೇಶ್ ಪೊದುವಾಳ್, ಎಂಎಲ್ಸಿ ಪ್ರತಾಪಸಿಂಹ ನಾಯಕ್, ಉದ್ಯಮಿ ಶಶಿಧರ ಬಿ. ಶೆಟ್ಟಿ ನವಶಕ್ತಿ ಬರೋಡ, ತಜಂಪಾಡಿ ಆರ್.ಆರ್ ಎಸ್ ಮುಖಂಡ ಸುಬ್ರಹ್ಮಣ್ಯ ಭಟ್ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲಿಯನ್, ಸಿ ಎ ಬ್ಯಾಂಕ್ ಬಂಗಾಡಿ ನಿರ್ದೇಶಕ ಎ.ಬಿ. ಉಮೇಶ್ ಹತ್ಯಡ್ಕ, ಸಮಿತಿ ಅಧ್ಯಕ್ಷ ಶ್ರೀಧರ ಗುಡಿಗಾರ, ಸಮಿತಿಯ ಗೌರವಾಧ್ಯಕ್ಷ ಕುಂಜಿರ ಗುರುಸ್ವಾಮಿ ಭಾಗವಹಿಸಿದರು.
ಬೆಳಿಗ್ಗೆ ಗಣಹೋಮ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ಶಿವದೂತೆ ಗುಳಿಗೆ” ತುಳು ಯಕ್ಷಗಾನ ಬಯಲಾಟ ನಡೆಯಿತು.
ಇಂದು ಬೆಳಿಗ್ಗೆ ದೇವಿದರ್ಶನ, 4 ಗಂಟೆಗೆ ಅಗ್ನಿ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಡಾ| ಪ್ರದೀಪ್ ಎ ಸ್ವಾಗತಿಸಿ, ಎಸ್.ಡಿ.ಎಮ್ ಕಾಲೇಜು ಉಪನ್ಯಾಸಕ ಶ್ರೀಧರ ಭಟ್ ನಿರೂಪಿಸಿದರು.