31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.30 ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರಕ್ಕೆ ಯುಗಲಮುನಿವರ್ಯರಾದ ಪರಮಪೂಜ್ಯ108 ಶ್ರೀ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮುನಿ ಮಹಾರಾಜ ಪುರಪ್ರವೇಶ

ಬೆಳ್ತಂಗಡಿ: ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಜೈನ್ ಪೇಟೆ , ಬೆಳ್ತಂಗಡಿ ಇಲ್ಲಿಗೆ ಡಿ.30 ಶನಿವಾರ ಬೆಳಗ್ಗೆ 8 ಗಂಟೆಗೆ
ಪರಮಪೂಜ್ಯ ಪ್ರಜ್ಞಾಶ್ರಮಣ ಆಚಾರ್ಯ ಶ್ರೀದೇವನಂದಿ ಗುರುಗಳ ಪರಮ ಶಿಷ್ಯರಾದ ಯುಗಲಮುನಿವರ್ಯರಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ಪರಮಪೂಜ್ಯ ೧೦೮ ಶ್ರೀ ಅಮರಕೀರ್ತಿ ಮುನಿ ಮಹಾರಾಜರು ಭವ್ಯ ಮೆರವಣಿಗೆಯೊಂದಿಗೆ ಪುರಪ್ರವೇಶ ಗ್ಯೆಯಲ್ಲಿದ್ದಾರೆ.


ಮುನಿದ್ವಯರನ್ನು ಬೆಳ್ತಂಗಡಿ ನಗರದಿಂದ ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ವರೆಗೆ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಇವರು ಮಧ್ಯಾಹ್ನದ 3:30 ರಿಂದ ಮಂಗಳ ಪ್ರವಚನವನ್ನು ಮಾಡಲಿರುವರು. ಅದೇ ರೀತಿ ಹೊಸ ವರ್ಷದ ಆರಂಭದ ದಿನವಾದ ಜನವರಿ 1 ರಂದು ಬೆಳ್ತಂಗಡಿ ಬಸದಿಯಲ್ಲಿ ಮುನಿಗಳ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನ ಅಡಿಯಲ್ಲಿ ವಿಶ್ವಶಾಂತಿ ಗಾಗಿ ಬೆಳಗ್ಗೆ 7:30 ರಿಂದ
ಶ್ರೀ ಶಾಂತಿಚಕ್ರ ಆರಾಧನಾ ವಿಧಾನವು ನಡೆಯಲಿದ್ದು ಇದೇ ದಿನ ಅಪರಾನ್ನ 1.30 ರಿಂದ 3:30ರವರೆಗೆ ಉಭಯ ಜಿಲ್ಲೆಯ ಸುಪ್ರಸಿದ್ಧ ಜೈನ್ ಸಂಗೀತ ಸಂಸ್ಥಾನ ಮೂಡಬಿದ್ರೆಯ ಶ್ರೀಮತಿ ಸೌಮ್ಯ ಮತ್ತು ಸರ್ವೇಶ್ ಜೈನ್ ಇವರಿಂದ ಜೈನ್ ಸಂಗೀತ ಸುಧೆ ವಿಶೇಷ ಗಾನ ಲಹರಿ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಅಪರಾಹ್ನ 3:30 ರಿಂದ ಮುನಿದ್ವಯರಿಂದ ದಿವ್ಯ ಮಂಗಲ ಪ್ರವಚನ ನಡೆಯಲಿದೆ ಎಂದು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ ಜಯವರ್ಮರಾಜ್ ಬಳ್ಳಾಲ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Suddi Udaya

ಭಾಜಪ ಬೆಳ್ತಂಗಡಿ ಮಂಡಲ ವತಿಯಿಂದ ವಿಜಯಸಂಕಲ್ಪ ಅಭಿಯಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya

ಸುಲ್ಕೇರಿಮೋಗ್ರು: ಕುಸಿದ ತಡೆಗೋಡೆ ತೆರವುಗೊಳಿಸಿದ ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರು

Suddi Udaya

ನೀವು ಯಾವ ದೇವಸ್ಥಾನ, ಯಾವ ರೀತಿಯ ಪ್ರಮಾಣ ಮಾಡಲು ಹೇಳುತ್ತೀರಿ ಅದಕ್ಕೆ ನಾನು ಸದಾ ಸಿದ್ಧ: ಶಾಸಕ ಹರೀಶ್ ಪೂಂಜರಿಗೆ ಮಾಜಿ ಶಾಸಕ ವಸಂತ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ಪ್ರತಿ ಸವಾಲು

Suddi Udaya

ಮಚ್ಚಿನ: ನೆತ್ತರ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

Suddi Udaya
error: Content is protected !!