September 6, 2026
ಚಿತ್ರ ವರದಿತಾಲೂಕು ಸುದ್ದಿವರದಿ

ಪೆರಾಡಿ ಸಂಘದಲ್ಲಿ ಪಶು ಆಹಾರ ಸರಬರಾಜು ಅಭಿಯಾನ

ಪೆರಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪಶು ಆಹಾರ, ಸೈಲೇಜ್ ನ್ನು ಸದಸ್ಯರ ಮನೆಗೆ ಸರಬರಾಜು ಮಾಡುವ ಅಭಿಯಾನಕ್ಕೆ ಸಂಘದ ಅಧ್ಯಕ್ಷ ಯಶೋಧರ ಆಚಾರ್ಯ ಇವರು ಚಾಲನೆ ನೀಡಿದರು. ‘ಹಾಗೂ ಸದಸ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಪಶು ಆಹಾರ ಸೈಲೇಜನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದ್ದು ಸದಸ್ಯರು ಇದರ ಸದುಪಯೋಗಪಡಿಸಿಕೊಂಡು ಹೆಚ್ಚಿನ ಹಾಲು ಉತ್ಪಾದನೆಯನ್ನು ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕರು ಡಾ| ಸತೀಶ್ ರಾವ್ ಭಾಗವಹಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಇದು ಪ್ರಥಮವಾಗಿದ್ದು ನಂದಿನಿ ಪಶು ಆಹಾರ ಉತ್ಕೃಷ್ಟ ಗುಣಮಟ್ಟ ಬಿಐಎಸ್ ಸರ್ಟಿಫಿಕೇಟ್ ಹೊಂದಿದ್ದು ಎಲ್ಲಾ ಸದಸ್ಯರು ನಂದಿನಿ ಪಶು ಆಹಾರವನ್ನು ಉಪಯೋಗಿಸಿ ಜಾನುವಾರು ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀಮತಿ ಸುಚಿತ್ರ, ಸಂಘದ ಉಪಾಧ್ಯಕ್ಷ ಬಾಹುಬಲಿ ಜೈನ್, ನಿರ್ದೇಶಕರಾದ ರಮೇಶ್ ಕುಲಾಲ್, ಡೊಂಬಯ್ಯ ಮೂಲ್ಯ ಹಾಗೂ ಕಾರ್ಯದರ್ಶಿ ಸುಭಾಶ್ ಜೈನ್ ಹಾಗೂ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಇಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 12 ಕ್ಷೇತ್ರಗಳಲ್ಲೂ ಜಯಭೇರಿ, 1 ಕ್ಷೇತ್ರಕ್ಕೆ ಅವಿರೋಧ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಬಾಜೆ ಗ್ರಾ.ಪಂ ನಲ್ಲಿ ಪ್ರತಿಭಟನೆ : ಸರಕಾರಕ್ಕೆ ಮನವಿ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya

ಪೆರಿಂಜೆ ನೂರುಲ್ ಹುದಾ ಮದರಸ ಸಮಿತಿಗೆ ಆಯ್ಕೆ

Suddi Udaya
error: Content is protected !!