24.3 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ‘ ನಮ್ಮ ನಡಿಗೆ ಡಿಜಿಟಲ್ ಕಡೆಗೆ ‘ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮ

ಉಜಿರೆ : ಆಧುನಿಕತೆಯ ಭರಾಟೆಯಲ್ಲಿ ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಿದೆ. ಈ ಡಿಜಿಟಲ್ ಯುಗದಲ್ಲಿ ವ್ಯಾಪಾರ , ವ್ಯವಹಾರ , ಬ್ಯಾಂಕಿಂಗ್ ಕ್ಷೇತ್ರಗಳು ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿವೆ. ಸುರಕ್ಷಾ ಹಾಗೂ ಆರೋಗ್ಯ ಸೇತು ಇತ್ಯಾದಿ ಆರೋಗ್ಯ ಕ್ಷೇತ್ರದ ಅಪ್ಲಿಕೇಶನ್ ಇತ್ಯಾದಿಗಳ ಸಬಲೀಕರಣವನ್ನೂ ನೋಡಬಹುದಾಗಿದೆ. ವಿಶೇಷವಾಗಿ ಎಲ್ಲ ಕ್ಷೇತ್ರಗಳಲ್ಲೂ ಡಿಜಿಟಲಿಕರಣವಾಗುತ್ತಿರುವ ಸಂದರ್ಭದಲ್ಲಿ ಡಿಜಿಟಲ್ ಸಾಕ್ಷರತೆ ಇಂದಿನ ಅಗತ್ಯಗಳಲ್ಲಿ ಒಂದು ಎಂದು ಉಜಿರೆಯ ಎಸ್ ಡಿ ಎಂ ಐಟಿ ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರ್ಜುನ್ ಶೆಟ್ಟಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ‘ ನಮ್ಮ ನಡಿಗೆ ಡಿಜಿಟಲ್ ಕಡೆಗೆ ‘ ಎಂಬ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿಜಿಟಲಿಕರಣದ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಮಾಡುತ್ತಿರುವ ವಂಚನೆಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.
ನಿರಂತಸಾಗರ್ ಜೈನ್ ಸ್ವಾಗತಿಸಿ , ಸಿದ್ದಾಂತ್ ವಂದಿಸಿದರು. ಚಾರಿತ್ರ್ಯ ಜೈನ್ ನಿರೂಪಿಸಿದರು.

Related posts

ಸೆ.26: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ನಾರಾವಿ ಸಿಎ ಬ್ಯಾಂಕಿನ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಬೆಂಬಲ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾ.ಸೇ. ಯೋಜನೆಯ ಬಗ್ಗೆ ವಿಶೇಷ ಕಾರ್ಯಾಗಾರ

Suddi Udaya

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರಿಂದ ಮುಂಬಯಿ ಬಿಲ್ಲವ ಸಮುದಾಯ ಭವನ, ಗುರುಮಂದಿರ ಉದ್ಘಾಟನೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕು: ಧರ್ಮಗುರು ಫಾ. ಆದರ್ಶ್ ಜೋಸೆಫ್

Suddi Udaya

ಪುಂಜಾಲಕಟ್ಟೆ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೂತನ ಕಛೇರಿ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya
error: Content is protected !!