34.3 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ‘ಸಿರಿಧಾನ್ಯದಿಂದ ಆರೋಗ್ಯ ಸಿರಿ ‘ ಸಿರಿಧಾನ್ಯ ಜಾಗೃತಿ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಿರಿಧಾನ್ಯಗಳ ಆಹಾರ ಬಳಕೆಯ ಕ್ರಾಂತಿಯು ನಡೆಯುತ್ತಿದೆ. ಹಲವಾರು ರೈತರು ತಮ್ಮ ಮೂಲ ಬೆಳೆಗಳಿಗೆ ಪರ್ಯಾಯವಾಗಿ ಸಿರಿಧಾನ್ಯ ಬೆಳೆಯುವತ್ತ ಮನಸ್ಸು ಮಾಡುತ್ತಿದ್ದಾರೆ. ತನ್ಮೂಲಕ ರೈತರ ಸಬಲೀಕರಕರಣ ಸಾಧ್ಯವಾಗುತ್ತಿದೆ. ಸಾಮಾನ್ಯ ವ್ಯಕ್ತಿಗೂ ಸಹ ಸಿರಿಧಾನ್ಯಗಳ ಬಳಕೆಯ ಅರಿವು ಹೆಚ್ಚಾಗುತ್ತಿದೆ. ಒಟ್ಟಾರೆ ಇದು ಆರೋಗವರ್ಧಕವಾಗಿದ್ದು , ಔಷಧ ರೂಪದಲ್ಲಿ ಸಿರಿಧಾನ್ಯ ಆಹಾರವಾಗುತ್ತಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿಧಾನ್ಯಗಳ ದ.ಕ ಜಿಲ್ಲಾ
ಮಾರುಕಟ್ಟೆ ಅಧಿಕಾರಿ ಸಂದೀಪ್ ಭಟ್ ಹೇಳಿದರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಜಾಗೃತಿ ಸಪ್ತಾಹದ ಅಂಗವಾಗಿ ನಡೆಯುತ್ತಿರುವ ‘ ಸಿರಿಧಾನ್ಯದಿಂದ ಆರೋಗ್ಯ ಸಿರಿ ‘ ಎಂಬ ಸಿರಿಧಾನ್ಯ ಜಾಗೃತಿಯ ಬಗ್ಗೆ ಮಾತನಾಡಿದರು.

ನಮ್ಮ ಆಹಾರದ ಕಾಳಜಿ ನಾವೇ ಮಾಡಿಕೊಳ್ಳಬೇಕು. ಅಧಿಕ ಪೌಷ್ಠಿಕಾಂಶ ಇರುವ ಆಹಾರಕ್ರಮ ನಮ್ಮದಾಗಬೇಕಾದರೆ ಸಿರಿಧಾನ್ಯಗಳ ಬಳಕೆ ಹೆಚ್ಚು ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ರಾ. ಸೇ. ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಗೌರವಿಸಿದರು. ಸ್ವಯಂ ಸೇವಕ ಬೋರೇಶ್ ಸ್ವಾಗತಿಸಿದರು. ಸರಣ್ಯಾ ನಿರೂಪಿಸಿ , ವಂದಿಸಿದರು.

Related posts

ನ.19: ಬೆಳ್ತಂಗಡಿಯಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದಿಂದ “ಕನಸು ಇದು ಭರವಸೆಯ ಬೆಳಕು”: ವಿದ್ಯಾರ್ಥಿಗಳೊಂದಿಗೆ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

Suddi Udaya

ತೆಕ್ಕಾರು: ಸರಳಿಕಟ್ಟೆ ಜಂಕ್ಷನ್ ನಲ್ಲಿ ಮೋರಿ ಕುಸಿತ

Suddi Udaya

ಭಾರಿ ಗಾಳಿ ಮಳೆಗೆ ಕಳೆಂಜದ ಗಣೇಶ್ ರವರ ಮನೆಯ ಸಿಮೆಂಟ್ ಶೀಟು ಹಾನಿ

Suddi Udaya

ರೆಖ್ಯ ಸರಕಾರಿ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೈತೋಟ ರಚನೆ

Suddi Udaya

ಮಚ್ಚಿನ: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರುಕ್ಮಯ ಗೌಡ ನಿಧನ

Suddi Udaya
error: Content is protected !!