September 6, 2026
ಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅನುಗ್ರಹ ಕಾಲೇಜಿನಲ್ಲಿ ಅನುಕ-2025 ರ ಉದ್ಘಾಟನೆ

ಉಜಿರೆ: ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಅನುಕ-2025ರ ಉದ್ಘಾಟನೆಯು ಕಾಲೇಜಿನ ಆಡಿಟೋರಿಯಮ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ.ವಿಜಯ್ ಲೋಬೋ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಆಧುನಿಕ ಯುಗದಲ್ಲಿ ವಾಣಿಜ್ಯ ವಿಭಾಗದ ಮಹತ್ವವನ್ನು ತಿಳಿಸಿ ಇಂತಹ ಕಾರ್ಯಕ್ರಮಗಳು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ದಾರಿದೀಪವಾಗಲಿಯೆಂದು ಅನುಕ-2025 ರ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಯುವ ಸ್ಪರ್ಧೆಗಳಿಗೆ ಶುಭಹಾರೈಸಿದರು.


ಮುಖ್ಯ ಅಥಿತಿಗಳಾಗಿ ಅನುಗ್ರಹ ಕಾಲೇಜಿನ ಹಳೇ ವಿದ್ಯಾರ್ಥಿ ಎಸ್.ಡಿ.ಎಂ ಪದವಿ ಕಾಲೇಜಿನ ವ್ಯವಹಾರಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಸ್ಚಂದ್ರ ಕೆ.ಎಸ್ ಮಾತನಾಡಿ ವಿದ್ಯಾರ್ಥಿಗಳು ತಾವು ಪಡೆದ ಅಂಕಗಳ ಜತೆಯಲ್ಲಿ ಜೀವನ ಕೌಶಲ್ಯವನ್ನು ಬೆಳೆಸಬೇಕು.ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಬೇಕು.ಎಂದು ಹೇಳಿ ಕಾಲೇಜಿನ ವಾಣಿಜ್ಯ ವಿಭಾಗದ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು

ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಕಾವ್ಯಶ್ರೀ, ಕಾರ್ಯದರ್ಶಿ ಮಾರ್ಕ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿ ನೀರಜ್ ಕಾರ್ಯಕ್ರಮ ನಿರೂಪಿಸಿದರು.ಅಸ್ಮಿತ್ ಲೋಬೋ ಸ್ವಾಗತಿಸಿ ಮಾರ್ಕ್ ವಂದಿಸಿದರು.

Related posts

ತಾಲೂಕಿನ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಆಕರ್ಷಕವಾದ ಬಟ್ಟೆ ಖರೀದಿಗೆ ಸುವರ್ಣಾವಕಾಶ ಬೆಳ್ತಂಗಡಿಯಲ್ಲಿ ನೂತನವಾಗಿ ಶುಭಾರಂಭಗೊಂಡ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಕೆಜಿ ಲೆಕ್ಕದಲ್ಲಿ ಮಕ್ಕಳ ಉಡುಪು ನೀಡುವ ಈ ಉದ್ಯಮ ಸಫಲವಾಗಲಿ – ರಕ್ಷಿತ್ ಶಿವಾರಂ

Suddi Udaya

ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾಮ ಪಂಚಾಯತ್

Suddi Udaya

ಮೊಗ್ರು : ಅಲೆಕ್ಕಿ ಶ್ರೀರಾಮ ಶಿಶುಮಂದಿರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಳೆಂಜ: ಕಟ್ಟಿಗೆ ದಾಸ್ತಾನು ಕಟ್ಟಡಕ್ಕೆ ಉರುಳಿದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು

Suddi Udaya

ಪ್ರಗತಿಪರ ಕೃಷಿಕ ಬೊಕ್ಕಸ ಚಂದಪ್ಪ ಪೂಜಾರಿ ವಿಧಿವಶ

Suddi Udaya

ಶಿರ್ಲಾಲು ಸ. ಉ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!