ಬೆಳ್ತಂಗಡಿ : ಪಟ್ಟಣ ಪಂಚಾಯತ್ ಮತ್ತು ಬ್ಯಾಂಕ್ ಆಫ್ ಬರೋಡಾ ಬೆಳ್ತಂಗಡಿ ಸಹಯೋಗದೊಂದಿಗೆ
ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವು ಡಿ.30 ರಂದು ತಾಲೂಕು ಕಛೇರಿ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಹಶೀಲ್ದಾರರು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸಾಕ್ಷರತಾ ಆರ್ಥಿಕ ಸಮಿತಿ ಸಂಯೋಜಕಿ ಉಷಾ ವಿ. ನಾಯಕ್ ರವರು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಪ್ರತಿಜ್ಞಾ ವಿಧಿ ಮಾಡಿದರು.
ಕಾರ್ಯಕ್ರಮದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ, ಉಜ್ವಲ ಗ್ಯಾಸ್ ಯೋಜನೆ ಹಾಗೂ ಇನ್ನಿತರ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಹಾಗೂ ನೋಂದಣಿ ಮಾಡಲಾಯಿತು.
ಈ ವೇಳೆ ಭತ್ತದ ಕೃಷಿ ವಿಭಾಗದಲ್ಲಿ ಮಹೇಶ್ ಕೆಲ್ಲಗುತ್ತು, ಯಶೋಧ ಅಲ್ಲಾಟ ಬೈಲು, ಶಿಕ್ಷಣ ವಿಭಾಗದಲ್ಲಿ ಅತ್ಯಾಧಿಕ ಅಂಕ ಪಡೆದ ಬೆಳ್ತಂಗಡಿ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿ ಅಭಿಷೇಕ್ ವಿ.ಎಂ., ಹಾಗೂ ವಾಣಿ ಪ.ಪೂ ಕಾಲೇಜಿನ ವಿದ್ಯಾರ್ಥಿ ರಕ್ಷಿತಾ, ಬೀದಿ ವ್ಯಾಪಾರಸ್ಥರಾದ ಅಬೂಸಾಲಿ, ಅಶೋಕ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ. ನಿಟಕಪೂರ್ವಾಧ್ಯಕ್ಷೆ ರಜನಿ ಕುಡ್ವ, ನೊಡೆಲ್ ಅಧಿಕಾರಿಯಾಗಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಸುಕೇಶ್ ಕುಮಾರ್, ಎಸ್.ಬಿಐ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ಉಪಸ್ಥಿತರಿದ್ದರು.
ನಗರ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ. ವನಿತಾ ಪ್ರಾರ್ಥಿಸಿ , ಚಂದ್ರಹಾಸ್ ಬಳಂಜ ನಿರೂಪಿಸಿದರು.