ಆಂಧ್ರಪ್ರದೇಶದಲ್ಲಿ ನಡೆಯುವ, ದಕ್ಷಿಣ ಭಾರತದ ವಿಜ್ಞಾನ ಮೇಳ: ಬೆಳ್ತಂಗಡಿ ಎಸ್. ಡಿ. ಎಂ ಶಾಲಾ ವಿದ್ಯಾರ್ಥಿ ಅಧಿಶ್ ಬಿ.ಸಿ ಆಯ್ಕೆ

Suddi Udaya

ಬೆಳ್ತಂಗಡಿ: ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ, ಉಜಿರೆ (ರಾಜ್ಯಪಠ್ಯ ಕ್ರಮ) ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿ ಅಧಿಶ್ ಬಿ.ಸಿ ಇವರು ಪ್ರೌಢಶಾಲಾ ವಿದ್ಯಾರ್ಥಿಗಳ ವೈಯಕ್ತಿಕ ವಿಭಾಗದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಸ್ಪರ್ಧೆಯಲ್ಲಿ ಭಾಗವಹಿಸಿ ಆಂಧ್ರಪ್ರದೇಶದಲ್ಲಿ ನಡೆಯುವ, ದಕ್ಷಿಣ ಭಾರತದ ವಿಜ್ಞಾನ ಮೇಳ (SSIF) -2024ಕ್ಕೆ ಆಯ್ಕೆಯಾಗಿದ್ದಾರೆ.

ಡಿ.27 ರಂದು ಜವಾಹರ್ ನವೋದಯ ವಿದ್ಯಾಲಯ ದೊಡ್ಡಬಳ್ಳಾಪುರ, ಬೆಂಗಳೂರು ಇಲ್ಲಿ ನಡೆದಿರುವ ಸ್ಪರ್ಧೆಯಲ್ಲಿ “ಸ್ಮಾರ್ಟ್ ಬೋಟ್” ಎಂಬ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ಅವರು ತಮ್ಮ ಕೌಶಲ್ಯ ಮೆರೆದಿದ್ದಾರೆ. ಆ ಮೂಲಕ ಅವರು ಆಂಧ್ರಪ್ರದೇಶದಲ್ಲಿ ನಡೆಯುವ ದಕ್ಷಿಣ ಭಾರತದ ವಿಜ್ಞಾನ ಮೇಳ ( SSIF)-2024 ರ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಈ ಪ್ರತಿಭಾನ್ವಿತ ವಿದ್ಯಾರ್ಥಿಗೆ ಶಾಲೆಯ ಮುಖ್ಯೋಪಾಧ್ಯಾಯನಿ ವಿದ್ಯಾಲಕ್ಷ್ಮಿ ಯು ನಾಯಕ್ ರವರ ಪ್ರೋತ್ಸಾಹದೊಂದಿಗೆ ವಿಜ್ಞಾನ ಶಿಕ್ಷಕಿ ಧನ್ಯವತಿ.ಕೆ ಇವರು ಮಾರ್ಗದರ್ಶನ ನೀಡಿರುತ್ತಾರೆ.

ಇವರು ಬಿ ಎನ್ ಚಂದ್ರಶೇಖರ್ ಹಾಗೂ ಧನ್ಯವತಿ ದಂಪತಿಯ ಪುತ್ರನಾಗಿರುತ್ತಾರೆ.

Leave a Comment

error: Content is protected !!