24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡದ ಉದ್ಘಾಟನೆ

ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡದ ಉದ್ಘಾಟನೆ ಸಮಾರಂಭವು ಡಿ.30ರಂದು ವಿಜೃಂಭಣೆಯಿಂದ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಸಭಾಭವನ ಹಾಗೂ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಶುಭಹಾರೈಸಿದರು.

ಸಮಾರಂಭದ ಅಧ್ಯಕತೆಯನ್ನು ಪಡಂಗಡಿ ಪ್ರಾಥಮಿಕ ಕೃಷಿ ಪ.ಸ. ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ವಹಿಸಿದರು.
ಮುಖ್ಯ ಅತಿಥಿಗಳಾಗಿ ಪಡಂಗಡಿ ಗ್ರಾ.ಪಂ ಅಧ್ಯಕ್ಷ ವಸಂತ ಪೂಜಾರಿ, , ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ, ಬದ್ಯಾರು ಚರ್ಚ್ ಧರ್ಮಗುರುಗಳು ರೆ.ಫಾ. ಮೆಲ್ವಿನ್ ಡಿ’ಸೋಜ, ಪೇರಡ್ಕ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಮಂಜಿತ್ತಾಯ, ಮೊಹಿದ್ಧಿನ್ ಜುಮ್ಮಾ ಮಸೀದಿ ಖತೀಬರು ಎ.ಆರ್ ದಾರಿಮಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ, ಪಡಂಗಡಿ ಗ್ರಾ. ಪಂ.ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಹಾಲು.ಉ.ಸ. ಸ ಅಧ್ಯಕ್ಷ ಮ್ಯಾಕ್ಸಿಮ್ ಸಿಕ್ವೆರಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಉಪಾಧ್ಯಕ್ಷ ನರೇಂದ್ರ ಕುಮಾರ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸುಕೇಶಿನಿ ಎ , ನಿರ್ದೇಶಕರುಗಳಾದ ನಾರಾಯಣ ಮೂಲ್ಯ, ಸಂತೋಷ್ ಶೆಟ್ಟಿ, ರವಿ ಕುಮಾರ್ ಕೆ.ವೈ, ರಾಮು, ಪದ್ಮನಾಭ ನಾಯ್ಕ ಸಿ.ಸಿ, ಕೃಷ್ಣಪ್ಪ ಪೂಜಾರಿ, ಉಮೇಶ, ಶ್ರೀಮತಿ ಉಷಾ, ಶ್ರೀಮತಿ ಸುನಂದ, ನವೀನ, ಡಿ.ಸಿ,ಸಿ ಬ್ಯಾಂಕ್ ವಲಯ ಮೇಲ್ವಿಚಾರಕರು ಸಿರಾಜುದ್ದೀನ್, ತರಬೇತಿದಾರ ಸುಬ್ರಹ್ಮಣ್ಯ ಕೆ. ಹಾಗೂ ಸಿಬ್ಬಂದಿ ವರ್ಗ, ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಶಿಕ್ಷಕ ಶಿವಶಂಕರ್ ಮತ್ತು ಸೇವಂತಿ ಕಾರ್ಯಕ್ರಮ ನಿರೂಪಿಸಿದರು.

ಸಂಘದ ವಿಶೇಷತೆಗಳು
ರೈತರಿಗೆ ಕೃಷಿ, ಕೃಷಿಯೇತರ ಸಾಲಗಳು, ಸ್ವಸಹಾಯ ಗುಂಪುಗಳಿಗೆ ಸಾಲ, ಗೃಹ ನಿರ್ಮಾಣ, ದುರಸ್ಥಿಗೆ ಸಾಲ, ವಾಹನ, ಆಭರಣ ಈಡಿನ ಸಾಲ, ವಿದ್ಯುತ್ ಚಾಲಿತ ಮೋಟಾರು ವಾಹನಗಳಿಗೆ ಮತ್ತು ಸೋಲಾರ್ ಅಳವಡಿಕೆಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಠೇವಣಿಗಳಿಗೆ ಆಕರ್ಷಕ ಬಡ್ಡಿ, ರಸಗೊಬ್ಬರ, ಪಶು ಆಹಾರ, ಪಡಿತರ ಮಾರಾಟ ವ್ಯವಸ್ಥೆ, ಪ್ರಸ್ತುತ ರೈತರಿಗೆ ಅನುಕೂಲವಾಗುವಂತೆ ಕೊಬ್ಬರಿ ಎಣ್ಣೆ ಮಿಲ್ಲಿನ ವ್ಯವಸ್ಥೆ ಹಾಗೂ ವ್ಯಾಪಾರ ವ್ಯವಹಾರ ಆರಂಭ.

ಸಭಾಭವನದಲ್ಲಿ ವ್ಯವಸ್ಥೆಗಳು
ಸಭಾಭವನದಲ್ಲಿ 1000 ಕ್ಕಿಂತ ಹೆಚ್ಚಿನ ಆಸನದ ವ್ಯವಸ್ಥೆಯಿದ್ದು ಯಾವುದೇ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದಾಗಿದೆ. ಊಟದ ವ್ಯವಸ್ಥೆಗೆ ಬೇಕಾದ ಅಡುಗೆ ಕೋಣೆ , ಊಟದ ಹಾಲ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Related posts

ಕೆಎಸ್‌ಎಮ್‌ಸಿಎ ಸಂಘಟನೆಗೆ ನೂತನ ನಿರ್ದೇಶಕರಾಗಿ ರೆ.ಫಾ. ಆದರ್ಶ್ ಜೋಸೆಫ್ ಪುದಿಯೆಡತ್ ನೇಮಕ

Suddi Udaya

ನಿಡ್ಲೆ , ಬೂಡುಜಾಲು ಗ್ರಾಮಸ್ಥರಿಂದ ರಸ್ತೆ ದುರಸ್ತಿ

Suddi Udaya

ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಎಸ್ ಡಿ ಎಂ ಬೆಳ್ತಂಗಡಿಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ವೇಣೂರು: ಮೂಡಕೋಡಿಯಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ

Suddi Udaya

ಉಜಿರೆ ರೋಡ್ ಶೋ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸೀರೆ ವಿತರಣೆ ಆರೋಪ: ಸೂಕ್ತ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ದೂರು : ಲೋಕೇಶ್ವರಿ ವಿನಯಚಂದ್ರ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya
error: Content is protected !!