April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಪಂಚಾಯತ್ ನ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಗ್ರಂಥಾಲಯಕ್ಕೆ ಎನ್ನೆಸ್ಸೆಸ್ ಸ್ವಯಂ ಸೇವಕರ ಭೇಟಿ

ಉಜಿರೆ : ಉಜಿರೆ ಪಂಚಾಯತ್ ಇದರ ತ್ಯಾಜ್ಯ ಘಟಕವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ಮಾಡುತ್ತಿದ್ದು , ಅಲ್ಲಿನ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಬಗ್ಗೆ ತಿಳಿಯಲು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಕಸ ಕೇವಲ ಕಸವಲ್ಲ – ರಸ ಎನ್ನುವ ತ್ಯಾಜ್ಯ ನಿರ್ವಹಣೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದರು.

ಪ್ರಸ್ತುತ ರಿಪ್ಲಾಸ್ಟಿಕೊ ಎನ್ನುವ ಖಾಸಗಿ ಕಂಪನಿಯ ವತಿಯಿಂದ ಪ್ಲಾಸ್ಟಿಕ್ ಚೀಲ ಇತ್ಯಾದಿಗಳಿಂದ ಇಂಟರ್ ಲಾಕ್ ಟೈಲ್ಸ್ ಉತ್ಪಾದನೆ ಮಾಡಲಾಗುತ್ತಿದೆ. ಉಳಿದ ತ್ಯಾಜ್ಯಗಳನ್ನು ಬೇರ್ಪಡಿಸಿ ವಿವಿಧ ಉಪಯೋಗ ಪಡೆಯಲಾಗುತ್ತಿದೆ. ಹಸಿ ಕಸಗಳಿಂದ ಗೊಬ್ಬರ ಮಾಡಲಾಗುತ್ತಿದೆ.

ರಿಪ್ಲಾಸ್ಟಿಕೊ ಕಂಪೆನಿಯ ಪ್ರಬಂಧಕ ಕಾರ್ತಿಕ್ ಅವರು ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿ ಹಾಗೂ ಇಂಟರ್ ಲಾಕ್ ಟೈಲ್ಸ್ ಗಳ ತಯಾರಿಕೆಯ ವಿವಿಧ ಹಂತಗಳ ಮಾಹಿತಿ ನೀಡಿದರು. ಸಿಬಂದಿಗಳಾದ ಲೀಲಾ ಹಾಗೂ ಶುಭಾ ಅವರು ಸಹಕರಿಸಿದರು.

ಇದೇ ಸಂದರ್ಭದಲ್ಲಿ ಉಜಿರೆಯ ಪಂಚಾಯತ್ ನ ಗ್ರಂಥಾಲಯ ಹಾಗೂ ಕೂಸಿನ ಮನೆಗೆ ಭೇಟಿ ನೀಡಲಾಯಿತು. ಅಧ್ಯಕ್ಷೆ ಉಷಾಕಿರಣ ಕಾರಂತ್ , ಉಪಾಧ್ಯಕ್ಷರಾದ ರವಿಕುಮಾರ್ ಬರಮೇಲು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿ ಪ್ರಕಾಶ್ ನೊಚ್ಚ ಮಾರ್ಗದರ್ಶನ ಮಾಡಿದರು.
ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಇವರ ನೇತೃತ್ವದಲ್ಲಿ ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಕಾರ್ಯಕ್ರಮ ಸಂಘಟಿಸಿದರು.
ಸ್ವಯಂ ಸೇವಕಿ ಅಕ್ಷತಾ ಎಂ ಜಿ ನಿರೂಪಿಸಿದರು. ಸಮ್ಮೆದ್ ಸ್ವಾಗತಿಸಿ, ವಂದಿಸಿದರು.

Related posts

ಉಜಿರೆ: ಎಸ್‌ಡಿಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya

ನೇತ್ರಾವತಿ ನದಿ ತಟದಿಂದ ಧರ್ಮಸ್ಥಳ ಅಣ್ಣಪ್ಪ ಸನ್ನಿಧಾನದವರೆಗೆ ಪಾದಯಾತ್ರೆ ಕು.ಸೌಜನ್ಯ ತಾಯಿ ಕುಸುಮಾವತಿ ಭಾಗಿ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Suddi Udaya

ಪಡಂಗಡಿಯಲ್ಲಿ ಶ್ರೀ ಕಟಿಲೇಶ್ವರಿ ಟ್ರೇಡರ್ಸ್ ಶುಭಾರಂಭ

Suddi Udaya

ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕ ಪೊಲೀಸ್ ವಶ: ಚಿಕ್ಕಮಗಳೂರು ದೊನಿಗದ್ದೆ ನಿವಾಸಿ ಸಂತೋಷ್ ಬಂಧನ

Suddi Udaya

ಕುವೆಟ್ಟು ಗ್ರಾ.ಪಂ. ವತಿಯಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya
error: Content is protected !!