ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಅಂಗಡಿಯಲ್ಲಿದ್ದ ಕಾರ್ಮಿಕನ ಗಮನ ಬೇರೆಡೆ ಸೆಳೆದು ಲಕ್ಷಾಂತರ ನಗದು ದೋಚಿದ ಕಳ್ಳರು: ಮಾಲಾಡಿ ಪುಷ್ಪರಾಜ ಹೆಗ್ಡೆಯವರ ಅಡಕೆ ವ್ಯಾಪಾರ ಅಂಗಡಿಯಿಂದ ರೂ. 2.31 ಲಕ್ಷ ಕಳವು

ಮಡಂತ್ಯಾರು: ಅಂಗಡಿಯಲ್ಲಿದ್ದ ಕಾರ್ಮಿಕನ ಗಮನ ಬೇರೆಡೆ ಸೆಳೆದು ಅಪರಿಚಿತರು ಲಕ್ಷಾಂತರ ನಗದು ದೋಚಿದ ಘಟನೆ ಮಡಂತ್ಯಾರಿನಿಂದ ವರದಿಯಾಗಿದೆ.

ಮಾಲಾಡಿ ಗ್ರಾಮದ ಟಿ. ಪುಷ್ಪರಾಜ ಹೆಗ್ಡೆ ಎಂಬವರ ದೂರಿನಂತೆ, ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯಲ್ಲಿ ಅಡಕೆ ವ್ಯಾಪಾರ ಅಂಗಡಿಯನ್ನು ನಡೆಸುತ್ತಿದ್ದು,ಜ.1 ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್‌ ಎಂಬವರಲ್ಲಿ ಕ್ಯಾಷ್‌ ಡ್ರಾವರ್‌ ನ ಕೀ ಯನ್ನು ನೀಡಿ, ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿರುತ್ತಾರೆ. ಮಧ್ಯಾಹ್ನ ಸಮಯ ಅಂಗಡಿಯಲ್ಲಿದ್ದ ಇಸ್ಮಾಯಿಲ್‌ ಕರೆ ಮಾಡಿ,ಇಬ್ಬರು ಅಪರಿಚಿತರು ಸ್ಕೂಟರಿನಲ್ಲಿ ಅಂಗಡಿಗೆ ಬಂದಿದ್ದು,ತನ್ನ ಗಮನ ಬೇರೆಡೆಗೆ ಸೆಳೆದು ಕ್ಯಾಷ್ ಡ್ರಾಯರ್ ನಲ್ಲಿದ್ದ ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ.

ಮಾಲೀರು ಅಂಗಡಿಗೆ ಬಂದು ಕ್ಯಾಶ್‌ ಡ್ರಾವರ್‌ ನ್ನು ಪರಿಶೀಲಿಸಿದಾಗ ಡ್ರಾವರ್‌ ನಲ್ಲಿದ್ದ ಒಟ್ಟು 2,31,000 ರೂ.ಹಣ ಕಳವಾಗಿರುವುದು ಕಂಡುಬಂದಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Related posts

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಬೆಳ್ತಂಗಡಿ : ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಿಶೋರ್ ಪಿ ನೇಮಕ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣರ ಸಮಾವೇಶ

Suddi Udaya

ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಲಾಯಿಲ ಚಂದ್ರಿಕಾ ರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya
error: Content is protected !!