23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

ಮಡಂತ್ಯಾರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಡಂತ್ಯಾರು ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ” ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮಡಂತ್ಯಾರು ಶಾಖೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಸದಾನಂದ ಪೂಜಾರಿ, ವಿಶ್ವನಾಥ ಪೂಜಾರಿ, ಶ್ರೀಧರ್ ಭಟ್, ತಿಮ್ಮಪ್ಪ ಗೌಡ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು.
ಸಂಘದ ಸದಸ್ಯ ಸದಾನಂದ ಪೂಜಾರಿ ಮಾತನಾಡಿ ಸಂಘವು ಗ್ರಾಹಕರ ಸಭೆಗೆ ಶುಭವನ್ನು ಹಾರೈಸಿ ಸಂಘವು ಇನ್ನಷ್ಟು ವಿಶಿಷ್ಟ ರೀತಿಯ ಯೋಜನೆಗಳನ್ನು ರೂಪಿಸಿ ಹಲವಾರು ಶಾಖೆಗಳನ್ನು ತೆರೆದು ಜನರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಆಶಿಸಿದರು.
ಸಂಘದ ಸದಸ್ಯ ಶ್ರೀಧರ್ ಭಟ್ ರವರು ಮಾತನಾಡಿ ಪಾಲು ಬಂಡವಾಳ ಜಾಸ್ತಿ ಮಾಡಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಸೇವೆಯ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಶಾಖೆಯಿಂದ ಹೆಚ್ಚಿನ ಠೇವಣಿಯನ್ನು ಸಂಗ್ರಹಿಸಿದ್ದು ಆ ಠೇವಣಿಯಿಂದ ಹೆಚ್ಚಿನ ಸಾಲವನ್ನು ನೀಡಲು ಸಾಧ್ಯವಾಗಿದೆ. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಕ್ಯಾನ್ಸರ್ ತಪಾಸಣಾ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಜನವರಿ 13 ರಂದು ಮಡಂತ್ಯಾರು ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಸಂಘದ ಪ್ರತಿ ಸದಸ್ಯನಿಗೆ 5 ಷೇರು ಪಡೆಯುವ ಅವಕಾಶವಿದ್ದು ಗ್ರಾಹಕರು ಹೆಚ್ಚುವರಿ ಷೇರುಗಳನ್ನು ಪಡೆಯುವಂತೆ ವಿನಂತಿಸಿದರು. ಈಗಾಗಲೇ ಠೇವಣಿ ಮೇಲಿನ ಬಡ್ಡಿ ದರವನ್ನು 9.50% ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಘದ ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವಿಸ್ತತರಿಸುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ. ಸಂಘವು ಈ ಕಿರು ಅವಧಿಯಲ್ಲಿ ಬೆಳೆಯಬೇಕಾದರೆ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮ ಹಾಗೂ ಗ್ರಾಹಕರ ಸಹಕಾರದಿಂದ ಸಾದ್ಯವಾಗಿದೆ. ಸಂಘದಲ್ಲಿ ಲಭ್ಯವಿರುವ ವಿಮಾ ಸೇವೆ, ಭವಿಷ್ಯ ಸುರಕ್ಷಾ ಯೋಜನೆಯ ಜೊತೆಗೆ ಎಲ್ಲಾ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ, ನಿರ್ದೇಶಕರಾದ ಸೀತಾರಾಮ್ ಎನ್ , ಗೋಪಾಲ್ ಎಮ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದರು.
ಶಾಖೆಯ ಶಾಖಾಧಿಕಾರಿ ಕುಮಾರಿ ಸುರಕ್ಷಾ ಸ್ವಾಗತಿಸಿ, ಸಿಬ್ಬಂದಿಯಾದ ಕುಮಾರಿ ಪ್ರಜ್ಞಾ ವಂದಿಸಿ, ಮಾನವ ಸಂಪನ್ಮೂಲ ಅಧಿಕಾರಿ ದೀಪಿಕ ಸನಿಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya

ಸಹಕಾರಿ ಸಂಘದ ವತಿಯಿಂದ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಅವರಿಗೆ ಅಭಿನಂದನೆ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ವರ್ಷದ ಸಂಭ್ರಮ

Suddi Udaya

ಸುಲ್ಕೇರಿ ಗ್ರಾ.ಪಂ ನಲ್ಲಿ ವಿಶೇಷ ಚೇತನರ ಸಮನ್ವಯ ಸಭೆ

Suddi Udaya

ಬೆಳ್ತಂಗಡಿ: 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಫೆ.3-7: ಶ್ರೀ ಕ್ಷೇತ್ರ ಓಡೀಲು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!