ಬೆಳ್ತಂಗಡಿ : ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ ಇಲ್ಲಿ ಗರ್ಭಗುಡಿಯ ಬಾಲರಾಮನ ಮೂರ್ತಿ ಮೂರ್ತಿ ನಿರ್ಮಾಣಕ್ಕಾಗಿ ದೇಶದ ಮೂರು ಶ್ರೇಷ್ಠ ಕಲಾವಿದರು ತಂಡವನ್ನು ಮಂದಿರದ ಟ್ರಸ್ಟ್ ಆಯ್ಕೆ ಮಾಡಿದ್ದು ಇದರಲ್ಲಿ ರಾಜಸ್ಥಾನದ ಒಂದು ತಂಡ ಹಾಗೂ ಕರ್ನಾಟಕದ ಎರಡು ತಂಡವಿದ್ದು ಈ ಪೈಕಿ ವಿಪಿನ್ ಬದುರ್ಯ ಹಾಗೂ ಜಿ.ಎಲ್.ಭಟ್.ರವರ ತಂಡದಲ್ಲಿ ನಾಲ್ಕು ಜನ ಶಿಷ್ಯರ ತಂಡ 1 ತಿಂಗಳ ಕಾಲ ಮೂರ್ತಿಯ ಕೆತ್ತನೆ ಕೆಲಸ ಸಂಪೂರ್ಣ ಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಕಲಾ ಶಿಲ್ಪಿ ಪ್ರಶಸ್ತಿ ಪಡೆದ ಜಯಚಂದ್ರ ಆಚಾರ್ಯ ಅವರು ಮೂರ್ತಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದರು. ನ್ಯಾಯತರ್ಪು ಗ್ರಾಮದ ನಾಳ ದೇವಿನಗರ ಜನತಾ ಕಾಲೋನಿ ನಿವಾಸಿ ಶಾಮರಾಯ ಆಚಾರ್ಯ ಹಾಗೂ ಲಲಿತಾ ದಂಪತಿಗಳ ಪುತ್ರರಾಗಿದ್ದಾರೆ.